ಹೊಸ ಹಾದಿಗಳು: ಅಮೆಜಾನ್ ಧರ್ಮಸಭೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಅಮೆಜಾನ್ ಕ್ಯಾಥೋಲಿಕ್ ಧರ್ಮಾದ್ಯಕ್ಷ ಮಂಡಳಿಯ ಅಧ್ಯಕ್ಷರಾದ ಕಾರ್ಡಿನಲ್ ಪೆದ್ರೋ ಬರೆಟ್ಟೋ ಅವರು ತಮ್ಮ ಪ್ರದೇಶದಲ್ಲಿ ನಡೆದ ಸಿನೋಡಲ್ ಚರ್ಚೆಯ ಫಲಗಳನ್ನು ವಿಶ್ವಗುರು ಫ್ರಾನ್ಸಿಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ವರದಿ: ಜೋಹಾನ್ ಪಚೀಕೋ, ಅಜಯ್ ಕುಮಾರ್

"ಅಮೆಜಾನ್ ವಿಶ್ವಗುರು ಫ್ರಾನ್ಸಿಸ್ ಅವರನ್ನು ಅಜ್ಜ ಎಂದು ಪರಿಗಣಿಸುತ್ತದೆ. ಹೌದು, ಇಲ್ಲಿನ ಜನರು ಅವರನ್ನು ಅಜ್ಜ ಎಂದು ಕರೆಯುತ್ತಾರೆ. ಆದಿವಾಸಿ ಬುಡಕಟ್ಟು ಜನರಿಗೆ ಅಜ್ಜ ಅಥವಾ ತಾತ ಎಂದರೆ ಸುಜ್ಞಾನವನ್ನು ಹೊಂದಿರುವ ಹಾಗೂ ಅಗಾಧ ಅನುಭವದೊಂದಿಗೆ ಎಲ್ಲರಿಗೂ ಮಾರ್ಗದರ್ಶನವನ್ನು ನೀಡುವ ಹಾಗೂ ಜೀವವನ್ನು ಉತ್ತೇಜಿಸುವ ವ್ಯಕ್ತಿಯಾಗಿದ್ದಾರೆ."

ಈ ಮಾತುಗಳನ್ನು ಅಮೆಜಾನ್ ಕ್ಯಾಥೋಲಿಕ್ ಧರ್ಮಾದ್ಯಕ್ಷ ಮಂಡಳಿಯ ಅಧ್ಯಕ್ಷರಾದ ಕಾರ್ಡಿನಲ್ ಪೆದ್ರೋ ಬರೆಟ್ಟೋ ಅವರು ಹೇಳಿದ್ದಾರೆ.

ಜೂನ್ 3ರಂದು ವಿಶ್ವಗುರು ಕ್ರಾಂತಿಸವರನ್ನು ಭೇಟಿ ಮಾಡಿದ ನಂತರ ಕಾರ್ಡಿನಲ್ ಪೆಡ್ರೋ ಅವರು ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು "ಐದು ವರ್ಷಗಳ ಹಿಂದೆ ಅಮೆಜಾನ್ ಪ್ರದೇಶಕ್ಕಾಗಿ ನಡೆದ ಸಿನೋಡಲ್ ಚರ್ಚೆಯ ನಂತರ ನಾವು ಮಾಡಿದ ಪ್ರಗತಿಯನ್ನು ವಿಶ್ವಗುರು ಫ್ರಾನ್ಸಿಸ್ ಅವರಿಗೆ ನಾವು ಮನವರಿಕೆ ಮಾಡಿದ್ದೇವೆ. ಹೇಗೆ ಅಮೆಜಾನ್ ಪ್ರದೇಶವು ಸಿನೋಡಲ್ ಚರ್ಚೆಯ ನಂತರ ಫಲ ನೀಡಿದೆ ಎಂಬುದನ್ನು ಸಹ ನಾವು ನಿರೂಪಿಸಿದ್ದೇವೆ." ಎಂದು ಹೇಳಿದರು.

"ಜ್ಯೂಬಿಲಿ 2025 ನಮ್ಮ ಮುಂದಿದೆ. ಇದು ಭರವಸೆಯ ಸಮಯವಾಗಿದ್ದು, ಇದು ಸಹ ಸಿನೋಡಲ್ ಆಧ್ಯಾತ್ಮಿಕತೆಯ ಭಾಗವಾಗಿದೆ." ಎಂದು ಅವರು ಹೇಳಿದರು.

04 June 2024, 17:27