ಹುಡುಕಿ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ನಾನು ಕ್ರಿಸ್ತರಂತೆ ಸ್ವತಂತ್ರನೋ ಅಥವಾ ಪ್ರಾಪಂಚಿಕ ವಿಷಯಗಳಿಂದ ಬಂಧಿತನೋ?

ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಯೇಸುವಿನಂತೆ ಎಲ್ಲರೂ ಸಹ ಪ್ರಾಪಂಚಿಕ ಅಂಶಗಳಾದ ಹಣ, ಅಧಿಕಾರ ಹಾಗೂ ತೋರ್ಪಡಿಕೆಯಿಂದ ಬಿಡಿಸಿಕೊಳ್ಳುವಂತೆ ಕರೆ ನೀಡಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಕಾಲ ಪ್ರಾರ್ಥನೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಯೇಸುವಿನಂತೆ ಎಲ್ಲರೂ ಸಹ ಪ್ರಾಪಂಚಿಕ ಅಂಶಗಳಾದ ಹಣ, ಅಧಿಕಾರ ಹಾಗೂ ತೋರ್ಪಡಿಕೆಯಿಂದ ಬಿಡಿಸಿಕೊಳ್ಳುವಂತೆ ಕರೆ ನೀಡಿದರು.

"ನೀವೆಲ್ಲರೂ ನಿಜವಾಗಿಯೂ ಸ್ವತಂತ್ರರಾಗಿದ್ದೀರೇ? ಪ್ರಾಪಂಚಿಕ ಆಮಿಷಗಳಿಂದ ಯೇಸುವಿನಂತೆ ಮುಕ್ತವಾಗಿದ್ದೀರೇ? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ತಮ್ಮ ಚಿಂತನೆಯನ್ನು ಪೋಪ್ ಫ್ರಾನ್ಸಿಸ್ ಅವರು ಆರಂಭಿಸಿದರು. ವ್ಯಾಟಿಕನ್ ನಗರದಲ್ಲಿ ಭಾನುವಾರ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಅವರು ಭಕ್ತಾಧಿಗಳನ್ನು ಕುರಿತು ಮಾತನಾಡಿದರು.

ಸಂತ ಮಾರ್ಕನ ಶುಭಸಂದೇಶದ ದೇವರ ವಾಕ್ಯದ ಮೇಲೆ ಚಿಂತನೆಯನ್ನು ಆರಂಭಿಸಿದ ಅವರು "ಯೇಸು ಕ್ರಿಸ್ತರು ಪವಿತ್ರಾತ್ಮರ ಶಕ್ತಿಯಿಂದ ಎಲ್ಲರ ರೋಗ-ರುಜಿನಗಳನ್ನು ವಾಸಿ ಮಾಡಿದರು. ಅವರು ಪವಿತ್ರಾತ್ಮರ ಪ್ರಭಾವದಿಂದ ದೈವಿಕವಾಗಿ ಸ್ವತಂತ್ರರಾಗಿದ್ದರು. ಅಂದರೆ ಅವರು ಜಗತ್ತಿನಲ್ಲಿ ಯಾವುದೇ ರೀತಿಯ ನಿಯಂತ್ರಣ ಅಥವಾ ಅಳತೆಯನ್ನು ನೋಡದೆ ಎಲ್ಲರನ್ನೂ ಪ್ರೀತಿಸುತ್ತಿದ್ದರು." ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಆದುದರಿಂದ ನಾವು ನಾವು ನಿಜವಾಗಿಯೂ ಸ್ವತಂತ್ರರೇ ಎಂಬುದನ್ನು ನಾವು ಅವಲೋಕಿಸಿಕೊಳ್ಳಬೇಕಿದೆ. ನಾನು ನನ್ನದೇ ಹಣ, ಅಧಿಕಾರ ಹಾಗೂ ಪ್ರಾಪಂಚಿಕ ಅಂಶಗಳಲ್ಲಿ ಬಂಧಿಯಾಗಿದ್ದೇನೆಯೇ? ಇದಕ್ಕಾಗಿ ನನ್ನ ಶಾಂತಿಯನ್ನು ನಾನು ಕಳೆದುಕೊಳ್ಳುತ್ತಿದ್ದೇನೆಯೇ? ಎಂಬ ಕುರಿತು ಆಳವಾದ ಚಿಂತನೆಯನ್ನು ನಡೆಸಬೇಕಿದೆ." ಎಂದು ಹೇಳಿದರು.

09 June 2024, 16:22