ಲಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಕ್ಕೆ ಪೋಪ್ ಫ್ರಾನ್ಸಿಸ್ ಭೇಟಿಯ ಲೋಗೋ ಬಿಡ
ಪೋಪ್ ಫ್ರಾನ್ಸಿಸ್ ಅವರು ಲಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ, ವ್ಯಾಟಿಕನ್ ಅವರ ಭೇಟಿಯ ಘೋಷಣೆ ಹಾಗೂ ಲೋಗೋವನ್ನು ಬಿಡುಗಡೆ ಮಾಡಿದೆ.
ವರದಿ: ವ್ಯಾಟಿಕನ್ ನ್ಯೂಸ್
ಸೆಪ್ಟೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಲಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ, ವ್ಯಾಟಿಕನ್ ಅವರ ಭೇಟಿಯ ಘೋಷಣೆ ಹಾಗೂ ಲೋಗೋವನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 26 ರಂದು ಪೋಪ್ ಫ್ರಾನ್ಸಿಸ್ ಅವರು ಪುಟ್ಟ ದೇಶವಾದ ಲಕ್ಸೆಂಬರ್ಗ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಲೋಗೋ ಪೋಪ್ ಫ್ರಾನ್ಸಿಸ್ ಅವರು ಆಶೀರ್ವಾದ ನೀಡುತ್ತಿರುವಂತೆ ಕೈಗಳನ್ನು ಎತ್ತಿರುವ, ಅವರ ಹಿಂದೆ ನಾಟ್ರೆ ಡೇಮ್ ಕ್ಯಾಥೆಡ್ರಲ್ ಇರುವಂತಹ ಚಿತ್ರವಾಗಿದೆ. ಇದರ ಘೋಷಣೆ "ಪೌವೋರ್ ಸರ್ವೀರ್" ಎಂದರೆ "ಆಗಮಿಸಿದ ಕ್ರಿಸ್ತರು" ಎಂಬುದಾಗಿದೆ.
ಅದೇ ದಿನ ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಲಿದ್ದು, ಈ ಭೇಟಿಯ ಘೋಷಣೆ ಭರವಸೆಯಲ್ಲಿ ನಡೆಯುವುದು ಎಂಬುದಾಗಿದೆ. ಇದರ ಲೋಗೋದಲ್ಲಿ ಹಲವು ವಯೋಮಾನದ ವ್ಯಕ್ತಿಗಳು ರಸ್ತೆಯನ್ನು ದಾಟುತ್ತಾ, ಪೋಪ್ ಫ್ರಾನ್ಸಿಸ್ ಅವರ ಜೊತೆ ನಡೆಯುವ ಚಿತ್ರಣವಿದೆ.
25 June 2024, 18:21