ಕೃತಕ ಬುದ್ಧಿಮತ್ತೆಯ ಬಗ್ಗೆ ಪೋಪ್: ಉಪಯೋಗಗಳನ್ನು ಬಳಸಿಕೊಳ್ಳಿ; ಅಪಾಯಗಳ ಬಗ್ಗೆ ಎಚ್ಚರಿಕೆಯಿಂದಿರಿ
ಮಾನವ ಒಳಿತಿಗೆ ಮಾತ್ರ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಮತ್ತೆ ಪುನರುಚ್ಛರಿಸಿದ್ದಾರೆ. ಅವರು ಕೃತಕ ಬುದ್ಧಿಮತ್ತೆಯ ಕುರಿತ ಸಮಾವೇಶದಲ್ಲಿ ಭಾಗವಹಿಸಿದರು.
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಕೃತಕ ಬುದ್ಧಿಮತ್ತೆಯ ಪರಿಣಾಮಗಳ ಕುರಿತು ಕೃತಕ ಬುಧ್ಧಿಮತ್ತೆಯ ಕುರಿತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಕೃತಕ ಬುದ್ಧಿಮತ್ತೆಯನ್ನು ನಾವು ಮಾನವ ಕುಲದ ಒಳಿತಿಗಾಗಿ ಉಪಯೋಗಿಸಬೇಕು. ಅದೇ ವೇಳೆ, ಅದರ ಅಪಾಯಗಳ ಕುರಿತೂ ಸಹ ನಾವು ಅರಿತುಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಎಂಬುದು ಮಾನವರ ಕೈಯಲ್ಲಿ ಒಂದು ಸಲಕರಣೆಯಾಗಿರಬೇಕೇ ಹೊರತು ಅದು ಮಾನವರನ್ನು ನಿಯಂತ್ರಿಸಬಾರದು.
ಕೃತಕ ಬುದ್ಧಿಮತ್ತೆ ಎಂಬುದು ಎಂದಿಗೂ ಮಾನವ ಘನತೆಯನ್ನು ಬಿಟ್ಟುಕೊಡಬಾರದು. ಇವೆಲ್ಲವನ್ನು ನಾವು ಮಾಡುವಾಗ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅದರ ಅಪಾಯಗಳ ಕುರಿತೂ ಸಹ ನಾವು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
22 June 2024, 16:13