ಇಬ್ಬರು ಅಲ್ಬೇನಿಯನ್ ಗುರುಗಳನ್ನು ಪುನೀತರ ಪದವಿಗೇರಿಸಲು ಒಪ್ಪಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಅಲ್ಬೇನಿಯನ್ ಗುರುಗಳಾದ ಫಾದರ್ ಲುಯಿಜಿ ಫಾಲೆಕ್, ಓ.ಎಫ್.ಎಂ. ಹಾಗೂ ಫಾದರ್ ಜಾನ್ ಗಾಜುಲ್ಲಿ ಸೇರಿದಂತೆ ಒಬ್ಬರು ಧಾರ್ಮಿಕ ಗುರುಗಳು ಹಾಗೂ ಇಬ್ಬರು ಕನ್ಯಾಸ್ತ್ರೀಯರನ್ನು ಪುನೀತರ ಪದವಿಗೇರಿಸಲು ಪೋಪ್ ಫ್ರಾನ್ಸಿಸ್ ಅವರು ಸಂತರುಗಳ ಪದವಿಗೇರಿಸುವ ಆಯೋಗದ ಫ್ರಿಫೆಕ್ಟ್ ಅವರಿಗೆ ತಮ್ಮ ಅನುಮೋದನೆಯನ್ನು ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಶುಕ್ರವಾರ ಸಂತರುಗಳ ಪದವಿಗೇರಿಸುವ ಆಯೋಗದ ಫ್ರಿಫೆಕ್ಟ್ ಅವರೊಂದಿಗೆ ವ್ಯಾಟಿಕನ್ನಿನಲ್ಲಿ ಸಭೆಯನ್ನು ನಡೆಸಿ, ಈ ಸಭೆಯಲ್ಲಿ ಈ ಮೇಲಿನ ಗುರುಗಳು ಹಾಗೂ ಧಾರ್ಮಿಕ ಕನ್ಯಾಸ್ತ್ರೀಯರನ್ನು ಪುನೀತರ ಪದವಿಗೇರಿಸಲು ತಮ್ಮ ಅನುಮೋದನೆಯನ್ನು ಅಧಿಕೃತವಾಗಿ ನೀಡಿದ್ದಾರೆ.
ಫ್ರಾನ್ಸಿಸ್ಕನ್ ಸಭೆಯ ಗುರುಗಳಾಗಿದ್ದ ಫಾದರ್ ಲುಯಿಜಿ ಫಾಲೆಕ್, ಓ.ಎಫ್.ಎಂ. ಅವರು ಮೊಂಟೆನೆಗ್ರಿನ್ ಸೈನಿಕರ ಹಿಂಸೆಯನ್ನು ವಿರೋಧಿಸಿದ್ದಕ್ಕಾಗಿ ಅವರಿಂದ ಕೊಲೆಗೀಡಾದರು. ಇದೇ ರೀತಿ, ಫಾದರ್ ಜಾನ್ ಗಾಜುಲ್ಲಿ ಅವರೂ ಸಹ ವಿಶ್ವಾಸದ ಕಾರಣಕ್ಕಾಗಿ ರಕ್ತಸಾಕ್ಷಿಗಳಾಗಿ ಮಡಿದಿದ್ದಾರೆ.