ಹುಡುಕಿ

ವಾಡಿಕೆಯಂತೆ ಜುಲೈ ತಿಂಗಳಲ್ಲಿ ವಿರಾಮವನ್ನು ತೆಗೆದುಕೊಳ್ಳಲಿರುವ ಪೋಪ್

ಪೋಪ್ ಫ್ರಾನ್ಸಿಸ್ ಅವರು ವಾಡಿಕೆಯಂತೆ ಜುಲೈ ತಿಂಗಳಲ್ಲಿ ಸಾರ್ವಜನಿಕ ಭೇಟಿ ಸೇರಿದಂತೆ ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ವಿರಾಮವನ್ನು ತೆಗೆದುಕೊಳ್ಳುತ್ತಾರೆ. ಆದರೆ, ಎಂದಿನಂತೆ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೊ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಜುಲೈ ತಿಂಗಳಲ್ಲಿ ವಿರಾಮವನ್ನು ತೆಗೆದುಕೊಳ್ಳಲಿದ್ದು, ಬಹುತೇಕ ತಮ್ಮ ಕಾರ್ಯಚಟುವಟಿಕೆಗಳಿಂದ ದೂರ ಉಳಿಯಲಿದ್ದಾರೆ. 

ಈ ಸಂದರ್ಭದಲ್ಲಿ ಅವರು ತಮ್ಮ ಸಾರ್ವಜನಿಕ ಭೇಟಿಯನ್ನೂ ಸಹ ತಾತ್ಕಾಲಿಕವಾಗಿ ನಿಲ್ಲಿಸಲಿದ್ದು, ಭಾನುವಾರಗಳಂದು ಮಾತ್ರ ಎಂದಿನಂತೆ ತ್ರಿಕಾಲ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ.

ಆಗಸ್ಟ್ ೭ ರಿಂದ ಎಂದಿನಂತೆ ಅವರು ಸಾರ್ವಜನಿಕ ಭೇಟಿಗಳಲ್ಲಿ ಭಾಗವಹಿಸುತ್ತಾರೆ. ಆಗಸ್ಟ್ ತಿಂಗಳಲ್ಲಿ ರೋಮ್ ನಗರದಲ್ಲಿ ತೀವ್ರ ತಾಪಮಾನ ಇರುವ ಕಾರಣ, ಸಾರ್ವಜನಿಕ ಭೇಟಿಗಳು ಸಂತ ಆರನೇ ಪೌಲರ ಸಭಾಂಗಣದಲ್ಲಿ ನಡೆಯಲಿವೆ ಎಂದು ವರದಿ ಮಾಡಲಾಗಿದೆ.      

28 June 2024, 14:48