ವ್ಯಾಟಿಕನ್ ನಗರದಲ್ಲಿ ಪ್ರಖ್ಯಾತ ಹಾಸ್ಯ ಕಲಾವಿದರನ್ನು ಭೇಟಿ ಮಾಡಲಿರುವ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ವಿಶ್ವವಿಖ್ಯಾತ ಹಾಸ್ಯ ಕಲಾವಿದರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಪ್ರತಿ ಮನೆಯಲ್ಲೂ ಮನೆ ಮಾತಾಗಿರುವ ಜಿಮ್ಮಿ ಫಾಲನ್, ಸ್ಟೀಫನ್ ಕೋಲ್ಬರ್ಟ್, ಕೊನಾನ್ ಓಬ್ರಯನ್, ಕ್ರಿಸ್ ರಾಕ್, ಹಾಗೂ ವೂಪಿ ಗೋಲ್ಡ್ ಬರ್ಗ್ ಅವರನ್ನು ವ್ಯಾಟಿಕನ್ ನಗರದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಶುಕ್ರವಾರ ಜೂನ್ ೧೪ ರಂದು ಭೇಟಿ ಮಾಡಲಿದ್ದಾರೆ.
ಈ ಭೇಟಿಯನ್ನು ವ್ಯಾಟಿಕನ್ನಿನ ಶಿಕ್ಷಣ ಹಾಗೂ ಸಂಸ್ಕೃತಿಯ ಪೀಠ ಮತ್ತು ಸಂವಹನ ಪೀಠವು ಜಂಟಿಯಾಗಿ ಆಯೋಜಿಸಿದೆ. ಇವರ ಜೊತೆಗೆ ಸುಮಾರು ನೂರಕ್ಕೂ ಹೆಚ್ಚು ಜನ ಕಲಾವಿದರು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಕಾರ್ಯಕ್ರಮದ ಉದ್ದೇಶ ಮಾನವ ಘನತೆಯ ಸೌಂದರ್ಯವನ್ನು ಉತ್ತೇಜಿಸಿ, ವಿಶ್ವದಲ್ಲಿ ಶಾಂತಿ ನೆಲೆಸಲು ಉತ್ತೇಜಿಸುವುದಾಗಿದೆ. ವಿಶ್ವ ವಿಖ್ಯಾತ ಹಾಸ್ಯ ಕಲಾವಿದರ ಸಂಗಮಕ್ಕೆ ವ್ಯಾಟಿಕನ್ನಿನ ಪ್ರೇಷಿತ ಅರಮನೆಯು ಸಾಕ್ಷಿಯಾಗಲಿದೆ.