ಹುಡುಕಿ

ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪವಿತ್ರಾತ್ಮರು ನಿಜವಾಗಿಯೂ ನಮ್ಮನ್ನು ಸ್ವತಂತ್ರರಾಗಿಸುತ್ತಾರೆ

"ಆತ್ಮ" ಎಂಬುದರ ಹೀಬ್ರೂ ಪದದ ಕುರಿತು ಚಿಂತನೆಯನ್ನು ನಡೆಸಿದ ವಿಶ್ವಗುರು ಫ್ರಾನ್ಸಿಸ್, ಪರಮ ತ್ರಿತ್ವದ ಮೂರನೇ ವ್ಯಕ್ತಿ ನಮ್ಮನ್ನು ನಿಜವಾಗಿಯೂ ಸ್ವತಂತ್ರರನ್ನಾಗಿಸುತ್ತಾರೆ ಎಂದು ಹೇಳಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ಬುಧವಾರ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಧರ್ಮೋಪದೇಶವನ್ನು ಆರಂಭಿಸಿ, ಪವಿತ್ರಾತ್ಮರ ಕುರಿತು ಮಾತನಾಡಿದ್ದಾರೆ. ಹಳೆಯ ಒಡಂಬಡಿಕೆಯಲ್ಲಿ "ರೌಚ್" ಎಂಬ ಪದದ ವಿವರಿಸಿದ ಪೋಪ್, ಇದರ ಅರ್ಥ "ಉಸಿರು" ಅಥವಾ "ಗಾಳಿ" ಎಂಬುದಾಗಿದೆ ಎಂದು ಹೇಳಿದರು.

ಈ ಪದವು ಪ್ರಪ್ರಥಮ ಬಾರಿಗೆ ಪರಮ ತ್ರಿತ್ವದ ಮೂರನೆಯ ವ್ಯಕ್ತಿಯಾದ ಪವಿತ್ರಾತ್ಮರ ಕುರಿತು ಮೊದಲ ಬಾರಿಗೆ ಮಾಹಿತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

"ಬೈಬಲ್ ಗ್ರಂಥದ ಸಂಪೂರ್ಣ ವಾಸ್ತವಗಳ ಕುರಿತು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಯೇಸುವಿನ ಬಳಿಗೆ ಬಂದು, ಅವರು ಹೇಳುವ ಆತ್ಮ ಸ್ವಾತಂತ್ರ್ಯದ ಕುರಿತು ಅರಿತುಕೊಳ್ಳಬೇಕಿದೆ. ಗಾಳಿ ತನಗೆ ಇಷ್ಟ ಬಂದ ಕಡೆ ಬೀಸುತ್ತದೆ. ಅದು ಯಾವಾಗ ಎಲ್ಲಿಂದ ಬೀಸಿತು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಅದರ ಶಬ್ದ ನಮಗೆ ತಿಳಿಯುತ್ತದೆ ಆದರೆ ಅದು ಎಲ್ಲಿದೆ ಎಂಬುದನ್ನು ನಾವು ಕಾಣಲು ಅಸಾಧ್ಯ. ಆತ್ಮದಿಂದ ಜನ್ಮವನ್ನು ಪಡೆದಿರುವ ಎಲ್ಲರ ವಿಷಯವು ಸಹ ಇದೆ ಆಗಿದೆ." ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

"ಆತ್ಮರಲ್ಲಿ ಸ್ವಾತಂತ್ರ್ಯ ಹೊಂದುವುದು ಎಂದರೆ ನಮಗೆ ಇಷ್ಟವಾದ ಸಂಗತಿಗಳನ್ನು ಮಾಡುವುದಲ್ಲ. ಬದಲಿಗೆ ದೇವರು ಇಚ್ಚಿಸುವ ಸಂಗತಿಗಳನ್ನು, ಅವರ ವಾಕ್ಯದ ಪ್ರಕಾರ ಮಾಡುವುದಾಗಿದೆ. ಈ ರೀತಿಯ ಸ್ವಾತಂತ್ರ್ಯ ಎಂಬುದು ಸೇವೆಯಲ್ಲಿ ತನ್ನನ್ನೇ ತಾನು ಅನುರಣಿಸುತ್ತದೆ." ಎಂದು ವಿಶ್ವಗುರು ಫ್ರಾನ್ಸಿಸ್ ಹೇಳುತ್ತಾರೆ.

05 June 2024, 17:25