ಪೋಪ್: ವಲಸಿಗರನ್ನು ಭೇಟಿ ಮಾಡುವುದು ಯೇಸುವನ್ನೇ ಸಂಧಿಸಿದಂತೆ

ವಲಸಿಗರು ಹಾಗೂ ನಿರಾಶ್ರಿತರ ವಿಶ್ವ ದಿನಾಚರಣೆಯ ಸಂದೇಶವನ್ನು ನೀಡುತ್ತಾ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್, ವಲಸಿಗರು ಧರ್ಮಸಭೆಯ ಇತಿಹಾಸದ ಯಾತ್ರೆಯ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

"ಎಲ್ಲಾ ವಯೋಮಾನದ ಪ್ರತಿಯೊಬ್ಬ ವಲಸಿಗರಲ್ಲಿ ದೈವ ಜನರು ನಿತ್ಯಜೀವದಡೆಗೆ ಕೈಗೊಂಡಿರುವ ಯಾತ್ರಿಕರನ್ನು ಕಾಣಬಹುದಾಗಿದೆ" ಎಂದು ವಿಶ್ವಗುರು ಫ್ರಾನ್ಸಿಸ್ ವಲಸಿಗರು ಹಾಗೂ ನಿರಾಶ್ರಿತರ ವಿಶ್ವ ದಿನಾಚರಣೆಯ ಸಂದೇಶವನ್ನು ನೀಡುತ್ತಾ ಮಾತನಾಡಿದ್ದಾರೆ.

ಪ್ರತಿವರ್ಷ ಸಪ್ಟೆಂಬರ್ 24 ವಲಸಿದರು ಹಾಗೂ ನಿರಾಶ್ರಿತರ ದಿನಾಚರಣೆಯನ್ನು ಆಚರಿಸುತ್ತಿದ್ದು ಈ ದಿನದಂದು ಪ್ರಪಂಚದಾದ್ಯಂತ ತಮ್ಮ ತಾಯ್ನಾಡನ್ನು ಹಾಗೂ ಮನೆಗಳನ್ನು ಬಿಟ್ಟು ದೂರದ ದೇಶಗಳಿಗೆ ಹಾಗೂ ಪ್ರದೇಶಗಳಿಗೆ ಬದುಕನ್ನು ಅರಸುತ್ತಾ ಹೊರಟಿರುವ ವಲಸಿಗರನ್ನು ಹಾಗೂ ನಿರಾಶ್ರಿತರನ್ನು ನೆನಪಿಸಿಕೊಂಡು ಅವರ ನೋವಿಗೆ ಹಾಗೂ ಕಷ್ಟಕ್ಕೆ ಮಿಡಿಯುವ ದಿನವೂ ಇದಾಗಿದೆ. ಪ್ರಸ್ತುತ ವಿಶ್ವದಾದ್ಯಂತ ಸುಮಾರು 281 ಮಿಲಿಯನ್ ವಲಸಿಗರಿದ್ದಾರೆ.

ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ದೇವರು ನಮ್ಮೊಡನೆ ಮಾತ್ರವಲ್ಲದೆ ವಲಸಿಗರೊಂದಿಗೆ ಹಾಗೂ ನಿರಾಶ್ರಿತರೊಂದಿಗೆ ಸಹ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ನಮ್ಮದು ಆಲಿಸುವ ಅಥವಾ ಸಿನೋಡಲ್ ಧರ್ಮಸಭೆಯಾಗಿದ್ದು ಎಲ್ಲರನ್ನೂ ನಾವು ಆಲಿಸಿ ಅವರನ್ನು ಒಳಗೊಳ್ಳಬೇಕಿದೆ ಎಂದು ಹೇಳಿದರು.

03 June 2024, 17:38