ಪೋಪ್: ನಿತ್ಯಜೀವದ ಬಗ್ಗೆ ಯೇಸು ಕೇವಲ ಮಾತನಾಡಲಿಲ್ಲ; ಅದನ್ನು ನಮಗೆ ನೀಡಿದರು
ವರದಿ: ವ್ಯಾಟಿಕನ್ ನ್ಯೂಸ್
"ಯೇಸು ಸಭೆಯ ಗುರು ಫಾದರ್ ಜೇಮ್ಸ್ ಮಾರ್ಟಿನ್ ಅವರು "ಕಮ್ ಫೋರ್ಥ್" ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಯೇಸುವಿನ ಅತ್ಯಂತ ಮಹಾ ಅದ್ಭುತ ಎಂದು ಈ ಪುಸ್ತಕದಲ್ಲಿ ಅವರು ಉಲ್ಲೇಖಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಹಾಗೂ ನಿಜವಾಗಿಯೂ ಅವರು ವಂದನಾರ್ಹರಾಗಿದ್ದಾರೆ." ಎಂದು ವಿಶ್ವಗುರು ಫ್ರಾನ್ಸಿಸ್ ಇಟಾಲಿಯನ್ ಭಾಷೆಯ ಅನುವಾದಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ "ಫಾದರ್ ಜೇಮ್ಸ್ ತಮ್ಮ ಪುಸ್ತಕದಲ್ಲಿ ಬೈಬಲ್ ಗ್ರಂಥದ ಸಾರಾಂಶವನ್ನು ಜೀವಂತಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ದೇವರ ವಾಕ್ಯದೊಂದಿಗೆ ಪ್ರೀತಿಯಲ್ಲಿ ಬಿದ್ದಾಗ ಆಗುವ ಅನುಭವದ ದೃಷ್ಟಿಕೋನದೊಂದಿಗೆ ಈ ಪುಸ್ತಕವನ್ನು ಬರೆದಿರುವ ಅವರು, ಹಲವು ಬರಹಗಾರರು ಈ ಕುರಿತು ಹೊಂದಿರುವ ದೃಷ್ಟಿಕೋನಗಳನ್ನು ಸಮೀಕರಿಸಿ, ನಮ್ಮದೇ ಸರಳ ಹಾಗೂ ಮಾನವಿಯ ವಾದವನ್ನು ಮುಂದಿಡುತ್ತಾರೆ." ಎಂದು ಹೇಳಿದರು.
"ಯೇಸು ನಮ್ಮ ಮರಣ ಅಥವಾ ಪಾಪದಿಂದ ಭಯವನ್ನು ಹೊಂದಿಲ್ಲ. ಬದಲಿಗೆ ಅವರು ನಮ್ಮ ಹೃದಯದ ಹೊರಗೆ ನಮಗಾಗಿ ಕಾಯುತ್ತಿದ್ದಾರೆ. ನಾವು ದೇವರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ನಮ್ಮ ಹೃದಯದ ಬಾಗಿಲನ್ನು ಹಾಕಿಕೊಂಡಿದ್ದೇವೆ. ಆದರೆ ಅವರು ನಾವು ಯಾವಾಗ ಹೃದಯದ ಕದ ತೆರೆಯುತ್ತೇವೆ ಎಂದು ಕಾಯುತ್ತಿದ್ದಾರೆ." ಎಂದು ವಿಶ್ವಗುರು ಫ್ರಾನ್ಸಿಸ್ ತಮ್ಮ ಮುನ್ನಡಿಯಲ್ಲಿ ಹೇಳಿದ್ದಾರೆ.
"ಅಂತಿಮವಾಗಿ ಈ ಜಗದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ನೋವು ದುಃಖ ಕಷ್ಟ ಹಾಗೂ ಯಾತನೆ ಇದೆ. ಯುದ್ಧ, ಪ್ರಕೃತಿ ವಿಕೋಪ ಸೇರಿದಂತೆ ಅನೇಕ ಕಾರಣಗಳಿಂದ ಜನರು ನೋವನ್ನು ಅನುಭವಿಸುತ್ತಿದ್ದಾರೆ. ಇವೆಲ್ಲದಕ್ಕೂ ಪ್ರಭು ಏಸುಕ್ರಿಸ್ತರ ನಿತ್ಯಜೀವವೇ ಉತ್ತರವಾಗಿದೆ" ಎಂದು ಹೇಳುತ್ತಾರೆ.