ಪೋಪ್ ಫ್ರಾನ್ಸಿಸ್: ಕೀರ್ತನೆಗಳು, ಯೇಸುವಿನ ಪ್ರಾರ್ಥನೆ ಎಲ್ಲಾ ಕಾಲಕ್ಕೂ ಸಲ್ಲುತ್ತದೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
"ಕೀರ್ತನೆಗಳನ್ನು ನಮ್ಮ ಪ್ರಾರ್ಥನೆಯನ್ನಾಗಿ ಪ್ರಾರ್ಥಿಸುವುದು ಅತಿ ಮುಖ್ಯ. ಅವುಗಳನ್ನು ನಮ್ಮದೇ ಪ್ರಾರ್ಥನೆಗಳನ್ನಾಗಿ ಆಳವಡಿಸಿಕೊಂಡು, ಅವುಗಳ ಜೊತೆ ಪ್ರಾರ್ಥಿಸುವುದನ್ನು ನಾವು ರೂಢಿಸಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದರು.
ಪವಿತ್ರಾತ್ಮರ ಕುರಿತು ಧರ್ಮೋಪದೇಶವನ್ನು ಮುಂದುವರೆಸಿದ ಪೋಪ್ ಫ್ರಾನ್ಸಿಸ್, ಈ ವಾರ ಕೀರ್ತನೆಗಳ ಕುರಿತು ಮಾತನಾಡಿದರು.
೨೦೨೫ ರ ಜ್ಯೂಬಿಲಿ ವರ್ಷದ ಸಿದ್ಧತೆಗಾಗಿ ೨೦೨೪ನೇ ವರ್ಷವನ್ನು ಪ್ರಾರ್ಥನೆಯ ವರ್ಷವನ್ನಾಗಿ ಘೋಷಿಸಿದ್ದನ್ನು ಅವರು ನೆನಪಿಸಿಕೊಂಡರು.
"ಇಂದಿನ ಧರ್ಮೋಪದೇಶದ ಕಲಿಕೆಗಾಗಿ ನಾನು ಧರ್ಮಸಭೆಯ ಸಂಯೋಗವಾದ ಪವಿತ್ರಾತ್ಮರ ಕುರಿತು ಹಾಗೂ ಸಂಯೋಗ ಪ್ರಾರ್ಥನೆಯ ಕಾರಣಕ್ಕಾಗಿ ಕೀರ್ತನೆಗಳ ಕುರಿತು ನಾನು ಮಾತನಾಡುತ್ತೇನೆ. ಈ ಕೀರ್ತನೆಗಳ ಸಂಕಲನಕಾರರು ಹಾಗೂ ಸಂಯೋಜಕರು ಪವಿತ್ರಾತ್ಮರೇ ಆಗಿದ್ದಾರೆ." ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
"ನಾವು ಕೀರ್ತನೆಗಳನ್ನು ಓದುವಾಗ ದೇವರು ಅದನ್ನು ಸಕಲ ಸಂತರ ಸಮ್ಮುಖದಲ್ಲಿ ವಾದ್ಯಗೋಷ್ಠಿಯ ನಡುವೆ ಆಲಿಸುತ್ತಾರೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್, "ಇವು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದು, ಅದನ್ನು ನಾವು ಪ್ರತಿನಿತ್ಯ ಪ್ರಾರ್ಥಿಸಬೇಕು" ಎಂದು ಹೇಳಿದ್ದಾರೆ.