ಪೋಪ್ ಫ್ರಾನ್ಸಿಸ್: ನಿರಾಶ್ರಿತರನ್ನು ಸ್ವಾಗತಿಸಿ, ಉತ್ತೇಜಿಸಿ ಹಾಗೂ ಅವರ ಜೊತೆ ನಡೆಯಿರಿ
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ಜೂನ್ ೨೦ ರಂದು ಆಚರಿಸಲಾಗುವ ವಿಶ್ವಸಂಸ್ಥೆಯ ವಿಶ್ವ ನಿರಾಶ್ರಿತರ ದಿನದ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ಜಗತ್ತಿನಲ್ಲಿರುವ ಎಲ್ಲಾ ನಿರಾಶ್ರಿತರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಬುಧವಾರದ ತಮ್ಮ ಸಾರ್ವಜನಿಕ ಭೇಟಿಯ ಕೊನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ "ಶಾಂತಿ ಹಾಗೂ ಭದ್ರತೆಯನ್ನು ಹುಡುಕಿಕೊಂಡು ತಮ್ಮ ತಾಯ್ನಾಡು ಹಾಗೂ ಸ್ವಂತ ಮನೆ-ಮಠಗಳನ್ನು ತೊರೆದು, ಓಡಿ ಹೋಗಿರುವ ಎಲ್ಲಾ ನಿರಾಶ್ರಿತರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು ಮಾತ್ರವಲ್ಲದೆ; ವಿಶ್ವ ವಲಸಿಗರ ದಿನಾಚರಣೆ ಎಂಬುದು ಎಲ್ಲಾ ವಲಸಿಗರನ್ನು ಸೋದರತೆಯಿಂದ ದಿಟ್ಟಿಸಿ, ನೋಡಲು ಹಾಗೂ ಅವರ ಕುರಿತು ಆರೈಕೆಯನ್ನು ಮಾಡಲು ನಿರ್ಧಾರವನ್ನು ತೆಗೆದುಕೊಳ್ಳುವ ಸುಸಮಯವಾಗಿದೆ" ಎಂದು ಹೇಳಿದರು.
"ನಮ್ಮ ಬಾಗಿಲುಗಳನ್ನು ತಟ್ಟುತ್ತಿರುವ ಎಲ್ಲರನ್ನೂ, ವಿಶೇಷವಾಗಿ ನಿರಾಶ್ರಿತರನ್ನು ನಾವು ಸ್ವಾಗತಿಸಲು, ಉತ್ತೇಜಿಸಲು ಹಾಗೂ ಅವರ ಜೊತೆ ನಡೆಯಲು ನಾವು ಕರೆ ಹೊಂದಿದ್ದೇವೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ತಮ್ಮ ಸಾರ್ವಜನಿಕ ಭೇಟಿಯ ಕೊನೆಯಲ್ಲಿ ೧೯೨೪ ರಲ್ಲಿ ಮೊದಲ ಬಾರಿಗೆ ನಡೆದ "ಪ್ರೀಮುಮ್ ಕಂಚೀಲಿಯುಮ್ ಸಿನೆನ್ಸೆ" ಸಭೆಯ ನೂರನೇ ವರ್ಷಾಚರಣೆಯ ಅಂಗವಾಗಿ, ಚೈನೀಸ್ ಅಥವಾ ಚೀನಿ ಜನರಿಗಾಗಿ ಪ್ರಾರ್ಥಿಸಿದರು.