ಯುದ್ಧದ ವೃತ್ತವನ್ನು ನಿಲ್ಲಿಸಿ; ಯುದ್ಧ ಎಂದಿಗೂ ಸೋಲು: ಪೋಪ್ ಫ್ರಾನ್ಸಿಸ್
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಗುರುವಾರ ಪೂರ್ವ ಧರ್ಮಸಭೆಯ ನೆರವು ಸಂಸ್ಥೆಗಳ ಸಮೂಹದ ಸದಸ್ಯರೊಂದಿಗೆ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ವಿಶ್ವದಲ್ಲಿ ಶಾಂತಿಗಾಗಿ ತಮ್ಮ ಮನವಿಯನ್ನು ಮತ್ತೊಮ್ಮೆ ಮಾಡಿದ್ದಾರೆ ಹಾಗೂ ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ವಿಶೇಷವಾಗಿ ಉಕ್ರೇನ್ ಹಾಗೂ ಮಧ್ಯಪ್ರಾಚ್ಯಕ್ಕಾಗಿ ತಮ್ಮ ಹೃದಯಾಂತರಾಳದ ಮನವಿಯನ್ನು ಮಾಡಿದ್ದಾರೆ.
"ಯುದ್ಧದ ವಿಷಜಾಲವನ್ನು ಮುಂದುವರೆಸುವ ಹಾಗೂ ಅದರಿಂದ ಲಾಭವನ್ನು ಗಳಿಸುತ್ತಿರುವವರಿಗೆ ನಾನು ಹೇಳುವುದೇನೆಂದರೆ, ಯುದ್ಧ ಎಂಬುದು ಎಂದಿಗೂ ವಿನಾಶವಾಗಿದ್ದು, ಅದಕ್ಕೆ ಕೊನೆಯಲ್ಲಿ ಸೋಲಾಗುತ್ತದೆ. ಆದರೆ ಇದರಿಂದ ಯಾತನೆಯನ್ನು ಅನುಭವಿಸುವುದು ಮಾತ್ರ ಮುಗ್ಧ ಮಕ್ಕಳು ಹಾಗೂ ಜನರು" ಎಂದು ಹೇಳಿದ್ದಾರೆ.
ತಮ್ಮ ಈ ಮನವಿಯಲ್ಲಿ ವಿಶೇಷವಾಗಿ ಪೋಪ್ ಫ್ರಾನ್ಸಿಸ್ ಅವರು ಉಕ್ರೇನ್ ಹಾಗೂ ಪ್ಯಾಲೆಸ್ತೇನ್ ದೇಶದಲ್ಲಿ ಯುದ್ಧದಿಂದ ನರಳುತ್ತಿರುವವರಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿ, ಅವರಿಗೆ ಸಮಾಧಾನವನ್ನು ನೀಡಿದರು. ಪವಿತ್ರ ಪೀಠದ ವತಿಯಿಂದ ಯಾತನೆಯನ್ನು ಅನುಭವಿಸುತ್ತಿರುವವರಿಗೆ ವಿಶೇಷವಾಗಿ ಮಕ್ಕಳಿಗೆ ನೆರವನ್ನು ನೀಡುವುದಾಗಿ ಅವರು ಹೇಳಿದ್ದಾರೆ ಮಾತ್ರವಲ್ಲದೆ; ಸುಸ್ಥಿತಿಯಲ್ಲಿರುವ ದೇಶಗಳು ಇದಕ್ಕೆ ನೆರವಾಗಬೇಕು ಎಂದು ತಮ್ಮ ಮನವಿಯನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.