ಹೃದಯವನ್ನೇ ಕಳೆದುಕೊಂಡಿರುವ ಜಗತ್ತಿಗಾಗಿ ಪವಿತ್ರ ಹೃದಯದ ಕುರಿತು ಹೊಸ ಡಾಕ್ಯುಮೆಂಟ್ ಅನ್ನು ರಚಿಸಲಿರುವ ಪೋಪ್

ಯೇಸುವಿನ ಪವಿತ್ರ ಹೃದಯಕ್ಕೆ ಸಂಬಂಧಿಸಿದ ಡಾಕ್ಯುಮೆಂಟ್ ಅನ್ನು ವಿಶ್ವಗುರು ಫ್ರಾನ್ಸಿಸ್ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟಿಸಲಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಧರ್ಮಸಭೆಯ ನವೀಕರಣಕ್ಕಾಗಿ ಹಾಗೂ ಹೃದಯವನ್ನೇ ಕಳೆದುಕೊಂಡಿರುವ ಜಗತ್ತಿಗಾಗಿ ಪವಿತ್ರ ಹೃದಯದ ಕುರಿತು ಸಪ್ಟೆಂಬರ್ ತಿಂಗಳಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ನೂತನ ಪುಸ್ತಕವನ್ನು ಅಥವಾ ಡಾಕ್ಯುಮೆಂಟ್ ಅನ್ನು ಪ್ರಕಟಿಸಲಿದ್ದಾರೆ. ಈ ಕುರಿತು ಅವರು ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದ್ದಾರೆ.

ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿತವಾಗಿರುವ ಜೂನ್ ತಿಂಗಳಲ್ಲಿ ತಮ್ಮ ಮೊದಲ ಸಾರ್ವಜನಿಕ ಭೇಟಿ ಎಂದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಡಿಸೆಂಬರ್ ತಿಂಗಳಲ್ಲಿ ಯೇಸುಕ್ರಿಸ್ತರು ಸಂತ ಮಾರ್ಗರೇಟ್ ಆಲ್ಕೋಕೆ ಅವರಿಗೆ ದರ್ಶನವಿತ್ತ 350ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಈ ದಿನಾಂಕದಂದು ಯೇಸುವಿನ ಪವಿತ್ರ ಹೃದಯಕ್ಕೆ ಭಕ್ತಿ ಆಚರಣೆಗಳು ಪ್ರಪಂಚದಾದ್ಯಂತ ಆರಂಭವಾಗಲಿತ್ತು ಅವು ನಂತರದ ವರ್ಷದಲ್ಲಿ ಜೂನ್ ತಿಂಗಳಲ್ಲಿ ಕೊನೆಯಾಗಲಿದೆ.

ಈ ಕಾರಣಕ್ಕಾಗಿ ಯೇಸುವಿನ ಪವಿತ್ರ ಹೃದಯದ ಕುರಿತು ಲಭ್ಯವಿರುವ ಧರ್ಮಸಭೆಯ ದಾಖಲೆಗಳು, ಧರ್ಮಸಭೆಯ ಪಂಡಿತರ ಬರಹಗಳು ಹಾಗೂ ಇನ್ನುಳಿದ ಐತಿಹಾಸಿಕ ಹಾಗೂ ಬೈಬಲ್ ಗ್ರಂಥದ ಉಲ್ಲೇಖಗಳೊಂದಿಗೆ, ಪವಿತ್ರ ಹೃದಯಕ್ಕೆ ಭಕ್ತಿ ಆಚರಣೆಯನ್ನು ನವೀಕರಿಸುವ ಸಲುವಾಗಿ ವಿಶ್ವಗುರು ಪ್ರಾಚೀನ ಅವರು ನೂತನ ಪತ್ರವನ್ನು ಅಥವಾ ಪುಸ್ತಕವನ್ನು ಪ್ರಕಟಿಸಲಿದ್ದಾರೆ.

ಈ ಕುರಿತು ಅವರ ಸಿದ್ಧತೆಯ ಸಂದರ್ಭದಲ್ಲಿ ಎಲ್ಲಾ ಯಾತ್ರಿಕರು ಹಾಗೂ ಭಕ್ತಾದಿಗಳು ಅವರಿಗಾಗಿ ಪ್ರಾರ್ಥಿಸುವಂತೆ ಹಾಗೂ ವಿಶೇಷವಾಗಿ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸುವಂತೆ ಅವರು ಕರೆ ನೀಡಿದರು.

05 June 2024, 17:30