ಹುಡುಕಿ

ವಿಜ್ಞಾನಿಗಳಿಗೆ ಪೋಪ್: ಸತ್ಯವನ್ನು ಅನ್ವೇಷಿಸುವಲ್ಲಿ ವಿಶ್ವಾಸ ಹಾಗೂ ವಿಜ್ಞಾನವನ್ನು ಸಮೀಕರಿಸಿ

ವಿಶ್ವಾಸ ಹಾಗೂ ವಿಜ್ಞಾನ ಎಂಬುದು ದೇವರ ಪರಮೋನ್ನತ ಸ್ಥಾನದಿಂದ ಬಂದಿರುವಂತದ್ದಾಗಿದ್ದು, ಸತ್ಯವನ್ನು ಅನ್ವೇಷಿಸುವಲ್ಲಿ ವಿಶ್ವಾಸ ಹಾಗೂ ವಿಜ್ಞಾನವನ್ನು ಸಮೀಕರಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮರ್ಲೋ, ಅಜಯ್ ಕುಮಾರ್

ಗುರುವಾರ ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ವಿಜ್ಞಾನಿಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದರು. ವಿವಿಧ ದೇಶಗಳ ವಿಜ್ಞಾನಿಗಳು ಆರ್ಚ್'ಬಿಷಪ್ ಜಾರ್ಜ್ ಲೆಮೈತ್ರೆ ಅವರ ಸ್ಮರಣಾರ್ಥ ಆಯೋಜಿಸಿದ್ದ ವೈಜ್ಞಾನಿಕ ಸಮಾವೇಶಕ್ಕೆ ಆಗಮಿಸಿದ್ದರು.

ಇವರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ವಿಶ್ವಾಸ ಹಾಗೂ ವಿಜ್ಞಾನ ಎಂಬುದು ದೇವರ ದೈವಿಕ ಮೂಲದಿಂದ ಬರುವಂತದ್ದಾಗಿದ್ದು, ವಿಶ್ವಾಸ ಹಾಗೂ ವಿಜ್ಞಾನ ಎರಡನ್ನೂ ಸತ್ಯವನ್ನು ಅನ್ವೇಷಿಸುವ ನಿಟ್ಟಿನಲ್ಲಿ ಸಮೀಕರಿಸಬೇಕು ಎಂದು ಹೇಳಿದರು.

ಸಭೆಯ ಆರಂಭದಲ್ಲಿ ಆರ್ಚ್'ಬಿಷಪ್ ಜಾರ್ಜ್ ಲೆಮೈತ್ರೆ ಅವರಿಗೆ ಗೌರವವನ್ನು ಸೂಚಿಸಿದ ಪೋಪ್ ಫ್ರಾನ್ಸಿಸ್ ಅವರು, ಈಗ ನಾವು ನೋಡುತ್ತಿರುವ ಹಬ್ಬಲ್ ಪರಿಣಾಮ ಎಂಬ ವೈಜ್ಞಾನಿಕ ಸೂತ್ರವನ್ನು ಹಬ್ಬಲ್-ಲೆಮೈತ್ರೆ ಸೂತ್ರ ಎಂದು ಕರೆಯಬೇಕು. ಏಕೆಂದರೆ ಒಬ್ಬ ವಿಜ್ಞಾನಿಯಾಗಿ ಹಾಗೂ ದೈವಶಾಸ್ತ್ರಜ್ಞರಾಗಿ ಆರ್ಚ್'ಬಿಷಪ್ ಜಾರ್ಜ್ ಲೈಮೆತ್ರೆ ಅವರು ವೈಜ್ಞಾನಿಕ ಮನೋಭಿಲಾಷೆಯನ್ನು ರೂಪಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.    

20 June 2024, 18:50