155 ವರ್ಷಗಳ ನಿಸ್ವಾರ್ಥ ಸೇವೆಗೆ ಸೇಂಟ್ ಪೀಟರ್ಸ್ ಸರ್ಕಲ್ ಅನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್

ಭರವಸೆಯ ಜುಬಿಲಿ ಹಿನ್ನೆಲೆಯಲ್ಲಿ, ಸೈಂಟ್ ಪೀಟರ್ಸ್ ಸರ್ಕಲ್ ಧರ್ಮಸಭೆಗೆ ನೀಡಿದ ಅನುಪಮ ಸೇವೆಗಾಗಿ ಪೋಪ್ ಫ್ರಾನ್ಸಿಸ್ ಅವರನ್ನು ಶ್ಲಾಘಿಸುತ್ತಾರೆ. ಪ್ರೀತಿ ಹಾಗೂ ಸೇವೆಯನ್ನು ಮುಂದುವರಿಸುವ ಅವರ ಕಾಯಕವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಂತೆ ಕರೆ ನೀಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

"ನಿಮ್ಮ ಉಪಸ್ಥಿತಿ ಹಾಗೂ ಐಕ್ಯತೆಯ ಮೂಲಕ ನೀವು ಧರ್ಮಸಭೆಗೆ ಅನನ್ಯಸೇವೆಯನ್ನು ಸಲ್ಲಿಸಿದ್ದೀರಿ" ಎಂದು ಪೋಪ್ ಫ್ರಾನ್ಸಿಸ್ ಸೈಂಟ್ ಪೀಟರ್ಸ್ ಸರ್ಕಲ್ ಸಂಸ್ಥೆಗೆ ಧನ್ಯವಾದಗಳು ತಿಳಿಸಿದ್ದಾರೆ.

ವ್ಯಾಟಿಕನ್ ನಗರದಲ್ಲಿ ಈ ಸಂಸ್ಥೆಯ ಸದಸ್ಯರನ್ನು ಬರಮಾಡಿಕೊಂಡು ಅವರನ್ನು ಭೇಟಿ ಮಾಡುತ್ತಾ ಈ ಮಾತುಗಳನ್ನು ವಿಶ್ವಗುರು ಫ್ರಾನ್ಸಿಸ್ ಹೇಳಿದರು. ಈ ಸಂಸ್ಥೆಯನ್ನು 1869ರಲ್ಲಿ ಯುವ ರೋಮ್ ನಗರದ ನಾಗರಿಕರು ಸ್ಥಾಪಿಸಿದ್ದರು.

"ರೋಮ್ ನಗರದ ಬಡವರಿಗೆ ನೀವು ನೀಡುತ್ತಿರುವ ಸೇವೆಯನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ನೀವು ಅವರಿಗೆ ನೀಡುತ್ತಿರುವ ಸೇವೆ ಅನುಪಮವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಮುಂದುವರೆದು ಮಾತನಾಡಿದ ಅವರು ನಿಮ್ಮ ಅನುಪಮಾ ಸೇವೆ ಹಾಗೂ ಸೇವಾ ಮನೋಭಾವವನ್ನು ಮುಂದಿನ ಪೀಳಿಗೆಗೂ ಸಹ ನೀವು ಹಸ್ತಾಂತರ ಮಾಡಬೇಕು ಎಂದು ಸೇಂಟ್ ಪೀಟರ್ಸ್ ಸರ್ಕಲ್ ಸಂಸ್ಥೆಯ ಸದಸ್ಯರಿಗೆ ಉತ್ತೇಜನವನ್ನು ನೀಡಿದರು.

24 June 2024, 18:03