ಉಕ್ರೇನ್ ಆಸ್ಪತ್ರೆಗೆ ಮೂರನೇ ಆಂಬುಲೆನ್ಸ್ ಅನ್ನು ದಾನ ಮಾಡಿದ ವಿಶ್ವಗುರು ಫ್ರಾನ್ಸಿಸ್
ವರದಿ: ದೇಬೋರಾ ಕ್ಯಾಸ್ಟಲಿನೊ ಲುಭೋವ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಮೂರನೇ ಬಾರಿಗೆ ಉಕ್ರೇನ್ ದೇಶದ ಆಸ್ಪತ್ರೆಗೆ ಆಂಬುಲೆನ್ಸ್ ಅನ್ನು ದಾನ ಮಾಡುವ ಮೂಲಕ ಯುದ್ಧ ನಡೆಯುತ್ತಿರುವ ದೇಶಗಳ ಕುರಿತು ತಮ್ಮ ಕಾಳಜಿಯನ್ನು ಹಾಗೂ ಪ್ರಾರ್ಥನೆಗಳನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ವ್ಯಾಟಿಕನ್ ನ ದಾನಧರ್ಮ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಕೊನ್ರಾಡ್ ಕ್ರಜೇವಸ್ಕಿ ಅವರನ್ನು ಉಕ್ರೇನ್ ದೇಶಕ್ಕೆ ಎಂಟನೇ ಬಾರಿಗೆ ಆಂಬುಲೆನ್ಸ್ ಅನ್ನು ದಾನ ಮಾಡಲು ಕಳುಹಿಸಿದ್ದಾರೆ. ಈ ಮೂಲಕ ಯುದ್ಧಗ್ರಸ್ಥ ದೇಶಕ್ಕೆ ಮೂರನೇ ಬಾರಿಗೆ ಆಂಬುಲೆನ್ಸ್ ಅನ್ನು ವಿಶ್ವಗುರು ಫ್ರಾನ್ಸಿಸ್ ಸ್ನಾನ ಮಾಡಿದ್ದಾರೆ.
ಎಂಟನೇ ಬಾರಿಗೆ ಕಾಡಿನಲ್ಲಿ ಕೊನ್ರಡ್ ಅವರು 2000 ಕಿಲೋಮೀಟರ್ಗಳು ದೂರವಿರುವ ಉಕ್ರೇನ್ ದೇಶಕ್ಕೆ ಪ್ರಯಾಣಿಸಲಿದ್ದು, ವಿಶ್ವಗುರುಗಳ ಐಕ್ಯತೆಯನ್ನು ಅಲ್ಲಿನ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದರ ಜೊತೆಗೆ ವಿಶ್ವಗುರುಗಳು ವ್ಯಾಟಿಕನ್ ಔಷಧಿ ಕೇಂದ್ರ ಹಾಗೂ ಜೆಮೆಲ್ಲಿ ಆಸ್ಪತ್ರೆಯಿಂದ ದೊಡ್ಡ ಪ್ರಮಾಣದ ಔಷಧಿಗಳನ್ನು ಕಳುಹಿಸುತ್ತಿದ್ದಾರೆ.