ಪೋಪ್ ಫ್ರಾನ್ಸಿಸ್: ಮಡಿದ ಉಕ್ರೇನ್ ಯೋಧನ ಬೈಬಲ್ ಅನ್ನು ತಮ್ಮ ಮೇಜಿನ ಮೇಲೆ ಇಟ್ಟುಕೊಂಡಿದ್ದೇನೆ

ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್, ರಷ್ಯಾ ವಿರುದ್ಧದ ಯುದ್ಧದಲ್ಲಿ ಮಡಿದ ಉಕ್ರೇನ್ ಯೋಧನ ಬೈಬಲ್ ಅನ್ನು ತಮ್ಮ ಮೇಜಿನ ಮೇಲೆ ಇರಿಸಿಕೊಂಡಿದ್ದೇನೆ ಎಂದು ಹೇಳಿದರು.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಬುಧವಾರದ ತಮ್ಮ ಸಾರ್ವಜನಿಕ ಭೇಟಿಯಲ್ಲಿ ಪಾಲ್ಗೊಂಡು ಮಾತನಾಡಿದ ಪೋಪ್ ಫ್ರಾನ್ಸಿಸ್, ಕೀರ್ತನೆಗಳನ್ನು ಪ್ರಾರ್ಥಿಸುವುದರ ಮಹತ್ವದ ಕುರಿತು ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದರು.

"ನನ್ನ ಮೇಜಿನ ಮೇಲೆ ಉಕ್ರೇನಿಯನ್ ಯೋಧನೊಬ್ಬನ ಬೈಬಲ್ ಶ್ರೀಗ್ರಂಥ ಹಾಗೂ ಜಪಸರ ಇರುವುದಾಗಿ ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ." ಈ ಬೈಬಲ್ ಶ್ರೀಗ್ರಂಥ ಹಾಗೂ ಜಪಸರವು ರಷ್ಯಾ ವಿರುದ್ಧದ ಯುದ್ಧದಲ್ಲಿ ಮಡಿದ ಇಪ್ಪತ್ತೊಂದು ವರ್ಷದ ಯೋಧ ಒಲೆಕ್ಸಾಂಡರ್ ಎಂಬ ಯುವ ಸೈನಿಕನದ್ದಾಗಿದ್ದು, ಅದನ್ನು ಹಲವು ತಿಂಗಳುಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರಿಗೆ ಕಳುಹಿಸಲಾಗಿತ್ತು.

ಹಲವು ತಿಂಗಳುಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ಈ ಸೈನಿಕ ಬೈಬಲ್ ಅನ್ನು ಸಾರ್ವಜನಿಕವಾಗಿ ಎಲ್ಲರಿಗೂ ತೋರಿಸಿದ್ದರು.

ಇದೇ ವೇಳೆ ಅವರು ಯುದ್ಧಗ್ರಸ್ಥ ಉಕ್ರೇನ್ ದೇಶಕ್ಕಾಗಿ ಪ್ರಾರ್ಥಿಸಿದರು. ಮುಂದುವರೆದು ಮಾತನಾಡಿದ ಅವರು, ಜಗತ್ತಿನಲ್ಲಿ ಶಾಂತಿ ನೆಲಸುವಿಕೆಗಾಗಿ ಹಾಗೂ ಯುದ್ಧ ನಿಲ್ಲುವಂತೆ ವಿಶೇಷವಾಗಿ ಪ್ರಾರ್ಥಿಸಿದರು ಹಾಗೂ ಎಲ್ಲರೂ ಪ್ರಾರ್ಥಿಸಬೇಕೆಂದು ಕರೆ ನೀಡಿದರು.

19 June 2024, 16:09