ಹುಡುಕಿ

ಪೋಪ್: ಶಾಂತಿಗಾಗಿ ಹೋರಾಟದಲ್ಲಿ ಅಂತರ್ಧರ್ಮಿಯ ಸಂವಾದದ ಅಗತ್ಯವಿದೆ

ಅಂತರ್ಧರ್ಮಿಯ ಸಂವಾದವನ್ನು ಉತ್ತೇಜಿಸುವಲ್ಲಿ ಫೋಕೋಲಾರೆ ಮೂವ್ಮೆಂಟ್ ಅನ್ನು ವಿಶ್ವಗುರು ಫ್ರಾನ್ಸಿಸ್ ಶ್ಲಾಘಿಸಿದರು. ಇದೇ ವೇಳೆ ಅವರು ಈ ಸಂಸ್ಥೆಯು ಅಂತರ್ಧರ್ಮೀಯ ಸಂವಾದವನ್ನು ಹೆಚ್ಚು ಹೆಚ್ಚು ಏರ್ಪಡಿಸುವಲ್ಲಿ ಮಾಡುತ್ತಿರುವ ಪರಿಶ್ರಮಕ್ಕೆ ಧನ್ಯವಾದಗಳು ಅರ್ಪಿಸಿದರು.

ವರದಿ: ಫ್ರಾಂಚೆಸ್ಕ ಮರ್ಲೊ, ಅಜಯ್ ಕುಮಾರ್

ರೋಮ್ ನಗರದಲ್ಲಿ ನಡೆಯುತ್ತಿರುವ ಅಂತರ್ಧರ್ಮಿಯ ಸಂವಾದ ಸಮಾವೇಶದಲ್ಲಿ ಫೋಕೋಲಾರೆ ಮೂವ್ಮೆಂಟ್ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಅದರ ಅಧ್ಯಕ್ಷ ಇಸ್ರೇಲ್ ನ ಪ್ಯಾಲೆಸ್ತೀನ್ ಕುಟುಂಬದಲ್ಲಿ ಜನಿಸಿರುವ ಮಾರ್ಗರೇಟ್ ಕರಾಮ್ ಅವರೊಂದಿಗೆ ಆರಂಭದಲ್ಲಿ ಐಕ್ಯತೆಯನ್ನು ವ್ಯಕ್ತಪಡಿಸಿದರು.

ಅವರಿಗೆ ಶುಭಾಶಯವನ್ನು ಕೋರುವ ವೇಳೆ ವಿಶ್ವಗುರು ಫ್ರಾನ್ಸಿಸ್, ಆಕೆಯ ನಾಡಿನಲ್ಲಿ ಉಂಟಾಗುತ್ತಿರುವ ಅಪಾರ ಸಾವು ನೋವುಗಳಿಗೆ ಸಂತಾಪವನ್ನು ವ್ಯಕ್ತಪಡಿಸಿ ದುಃಖದಿಂದಿರುವ ಎಲ್ಲರೊಂದಿಗೂ ಸಹ ಐಕ್ಯತೆಯನ್ನು ವ್ಯಕ್ತಪಡಿಸಿದರು.

ಕ್ರೈಸ್ತೇತರ ಧರ್ಮಗಳ ಜನರೊಂದಿಗೆ ಅಂತರ್ಧರ್ಮಿಯ ಸಂವಾದವನ್ನು ಹಾಗೂ ಉತ್ತಮ ಸಂಬಂಧವನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಫೋಕೋಲಾರೆ ಮೂವ್ಮೆಂಟ್ ಸದಸ್ಯರಿಗೆ ಧನ್ಯವಾದಗಳು ತಿಳಿಸಿದರು.

ಅಂತರ್ಧರ್ಮಿಯ ಸಂವಾದ ಹಾಗೂ ಭಾವೈಕ್ಯತೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಪವಿತ್ರತ್ಮರು ಭಾವೈಕ್ಯತೆಯನ್ನು ವೃದ್ಧಿಗೊಳಿಸುವಲ್ಲಿ ನಮಗೆ ನೆರವಾಗುತ್ತಾರೆ. ಅವರ ವರದಾನ ಯಾವ ಸಂದರ್ಭದಲ್ಲಿ ನಮ್ಮ ಮೇಲೆ ಇಳಿದು ಬರುತ್ತದೆ ಎಂಬುದನ್ನು ನಾವು ಹೇಳಲಾಗುವುದಿಲ್ಲ. ಆದರೆ ಅವರು ಒಮ್ಮೆ ಸಕಾರಾತ್ಮಕ ಪರಿಣಾಮವನ್ನು ನಮ್ಮ ಮೇಲೆ ಬೀರಿದರೆ ಯಾವುದೇ ಸಮುದಾಯಗಳಾಗಲಿ ಪರಸ್ಪರ ಅರ್ಥೈಸಿಕೊಂಡು ಹಾಗೂ ಒಮ್ಮತದ ಮೂಲಕ ಕಾರ್ಯನಿರ್ವಹಿಸಲು ಸುಲಭವಾಗುತ್ತದೆ ಎಂದು ಹೇಳಿದರು.

ಅಂತಿಮವಾಗಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಅಂತರ್ಧರ್ಮಿಗೆ ಸಂವಾದ ಎಂಬುದು ಅತ್ಯಂತ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

03 June 2024, 17:45