ಹುಡುಕಿ

ವಿಶ್ವದಾದ್ಯಂತ ಯುದ್ಧ ಖೈದಿಗಳ ಬಿಡುಗಡೆಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ವಿಶ್ವದಾದ್ಯಂತ ಯುದ್ಧಗಳು ನಿಲ್ಲಬೇಕೆಂದು ಪ್ರತಿಪಾದಿಸಿದ್ದಾರೆ. ಉಕ್ರೇನ್ ದೇಶದ ಯುದ್ಧ ಖೈದಿಗಳು ಬಿಡುಗಡೆಯಾಗಿ ಮನೆಗೆ ಬಂದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ವರದಿ: ಫ್ರಾನ್ಸಿಸ್ಕೋ ಮೆರ್ಲೊ, ಅಜಯ್ ಕುಮಾರ್

ರಷ್ಯಾ ಸೇನೆಯು ಹತ್ತು ಜನ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆ ಸಂಭ್ರಮವನ್ನು ವ್ಯಕ್ತಪಡಿಸಿರುವ ಉಕ್ರೇನ್ ಹಾಗೂ ಪವಿತ್ರ ಪೀಠವು, ಇದೇ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದೆ.

ಈ ಮೂಲಕ ಪೋಪ್ ಫ್ರಾನ್ಸಿಸ್ ಮತ್ತೊಮ್ಮೆ ವಿಶ್ವದಾದ್ಯಂತ ಯುದ್ಧಗಳು ನಿಲ್ಲಬೇಕೆಂದು ಪ್ರತಿಪಾದಿಸಿದ್ದಾರೆ. ಉಕ್ರೇನ್ ದೇಶದ ಯುದ್ಧ ಖೈದಿಗಳು ಬಿಡುಗಡೆಯಾಗಿ ಮನೆಗೆ ಬಂದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಜೂನ್ ೨೯ ರಂದು ಸಂತರುಗಳಾದ ಪೇತ್ರ ಮತ್ತು ಪೌಲರ ಹಬ್ಬದ ದಿನ, ವ್ಯಾಟಿಕನ್ ನಗರದಲ್ಲಿ ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಮನವಿಯನ್ನು ಮಾಡಿದ್ದಾರೆ. ಈ ಯುದ್ಧ ಖೈದಿಗಳ ಜೊತೆಯಲ್ಲಿ ಬಿಡುಗಡೆಯಾದ ಇಬ್ಬರು ಗ್ರೀಕ್ ಕಥೋಲಿಕ ಗುರುಗಳ ಕುರಿತೂ ಸಹ ಅವರು ವಿಶೇಷ ಗಮನವನ್ನು ಹರಿಸಿದರು.

ಕೊನೆಯಲ್ಲಿ, ಯುದ್ಧದಲ್ಲಿ ನೋವುಂಡ ಹಾಗೂ ಯುದ್ಧ ಖೈದಿಗಳಾಗಿ ಹಿಂಸೆಯನ್ನು ಅನುಭವಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸಬೇಕೆಂದು ಎಲ್ಲರಿಗೂ ಪೋಪ್ ಫ್ರಾನ್ಸಿಸ್ ಕರೆ ನೀಡಿದರು.

29 June 2024, 14:29