ಹುಡುಕಿ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಕ್ರಿಸ್ತರ ಸಂತೋಷದಿಂದ ನಿಮ್ಮನ್ನು ದೂರಾಗಿಸಿಕೊಳ್ಳಬೇಡಿ

ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಎಲ್ಲರೂ ಸಹ ಅತ್ಯವಶ್ಯಕವಾದ ಅಂಶಗಳನ್ನು ಮಾತ್ರ ತೆಗೆದುಕೊಂಡು ಪ್ರಭುವಿನಲ್ಲಿಗೆ ಆಗಮಿಸಬೇಕು ಎಂದು ಕರೆ ನೀಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಎಲ್ಲರೂ ಸಹ ಅತ್ಯವಶ್ಯಕವಾದ  ಅಂಶಗಳನ್ನು ಮಾತ್ರ ತೆಗೆದುಕೊಂಡು ಪ್ರಭುವಿನಲ್ಲಿಗೆ ಆಗಮಿಸಬೇಕು ಎಂದು ಕರೆ ನೀಡಿದ್ದಾರೆ.

ನಾವು ದೇವರ ಸಂತೋಷವನ್ನು ಅನುಭವಿಸಬೇಕಾದರೆ ನಮ್ಮ ಬದುಕಿನಲ್ಲಿರುವ ಅನಾವಶ್ಯಕ ವಸ್ತುಗಳನ್ನು ಹಾಗೂ ಅಂಶಗಳನ್ನು ಕೈಬಿಡಬೇಕು. ಆಗ ಮಾತ್ರ  ನಾವು ಸಂತೋಷವಾಗಿ ಹಾಗೂ ಸರಳತೆಯಿಂದ ಪ್ರಭುವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಿಂಬಾಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. 

ಶುಭ ಸಂದೇಶದಲ್ಲಿ ಪ್ರಭುವೇಸು ಕ್ರಿಸ್ತರು ಸಹ ತಮ್ಮ ಶಿಷ್ಯರುಗಳನ್ನು ಸೇವ ಕಾರ್ಯಕ್ಕೆ ಕಳುಹಿಸುವಾಗ ಅವಶ್ಯಕತೆ ಎಂದು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು ಎಂದು ವಿಶ್ವಗುರು ನೆರೆದಿದ್ದ ಜನತೆಗೆ ನೆನಪಿಸಿದರು. ಅತ್ಯಂತ ಕಡಿಮೆ ವಸ್ತುಗಳು ಹಾಗೂ ಅಂಶಗಳು ನಮ್ಮ ಜೀವನದಲ್ಲಿದ್ದಾಗ ಮಾತ್ರ ನಾವು ಅತ್ಯಂತ ಸಂತೋಷವಾಗಿ ಬದುಕಬಹುದು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

14 July 2024, 18:26