ಹೈಟಿ ಕರಾವಳಿ ತೀರದಲ್ಲಿ 40 ವಲಸಿಗರ ಸಾವು

ಹೈಟಿ ಕರಾವಳಿಯಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ ಸುಮಾರು ೪೦ ಜನ ವಲಸಿಗರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಹೈಟಿ ಕರಾವಳಿಯಲ್ಲಿ ವಲಸಿಗರು ಪ್ರಯಾಣ ಮಾಡುತ್ತಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ ಸುಮಾರು ೪೦ ಜನ ವಲಸಿಗರು ಅಸುನೀಗಿದ್ದು, ಹಲವಾರು ಜನರು ಹಾಯಗೊಂಡಿರುವ ಘಟನೆ ಇಂದು ನಡೆದಿದೆ. ಅಂತರಾಷ್ಟ್ರೀಯ ವಲಸಿಗ ಸಂಸ್ಥೆಯು ಈ ಕುರಿತು ವರದಿ ಮಾಡಿದ್ದು, ಹೈಟಿ ದೇಶದಿಂದ ಬೇರೆ ದೇಶಕ್ಕೆ ವಲಸೆ ಹೋಗುತ್ತಿದ್ದ ಪರಿಣಾಮ ಇವರು ಅಸುನೀಗಿದ್ದಾರೆ.

ದಿನೇ ದಿನೇ ಹೈಟಿ ದೇಶದಲ್ಲಿ ಆಂತರಿಕ ಕಲಹಗಳು ಹೆಚ್ಚಾಗುತ್ತಿದ್ದು, ಅಪರಾಧಿಕ ಗುಂಪುಗಳು ಹಿಂಸೆಯನ್ನು ನಡೆಸುತ್ತಿವೆ. ಶಸ್ತ್ರಸಜ್ಜಿತ ಗುಂಪುಗಳು ಹಣಕ್ಕಾಗಿ ಅನೇಕ ಅಪಹರಣಗಳು ಹಾಗೂ ಹಿಂಸೆಯನ್ನು ನಡೆಸುತ್ತಿವೆ. ಹಿಂಸೆ, ಹಸಿವು ಹಾಗೂ ಇನ್ನಿತರ ಸಾಮಾಜಿಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರು ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಲು ನಿರ್ಧರಿಸುತ್ತಿದ್ದಾರೆ.

ಹೀಗೆ ವಲಸೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಬಾರಿ ಅವರು ಹಿಂಸೆ ಹಾಗೂ ಅಪಘಾತಗಳಿಗೆ ಗುರಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹಡಗಿಗೆ ಬೆಂಕಿ ಬಿದ್ದಂತಹ ಇನ್ನೂ ಅನೇಕ ದುರ್ಘಟನೆಗಳು ನಡೆದಿದ್ದು, ವಲಸಿಗರು ಇವುಗಳ ಸಂತ್ರಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.   

 

20 July 2024, 18:56