ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ವಲಸಿಗರು
ವರದಿ: ಅಲೆಸ್ಸಾಂದ್ರೋ ದೆ ಕರೋಲಿಸ್, ಅಜಯ್ ಕುಮಾರ್
ಮಂಗಳವಾರ ಮಧ್ಯಾಹ್ನ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಸೆನೆಗಲ್ ಹಾಗೂ ಗ್ಯಾಂಬಿಯಾ ದೇಶದ ವಲಸಿಗರನ್ನು ಭೇಟಿ ಮಾಡಿದರು. ಈ ರೀತಿಯ ಭೇಟಿ ಇದು ಮೊದಲಲ್ಲ. ಅನೇಕ ಭೇಟಿಗಳಲ್ಲಿ ಇದೂ ಸಹ ಒಂದಾಗಿದೆ. ಆದರೆ ಪ್ರತಿ ಭೇಟಿಯಲ್ಲೂ ಅದೇ ಪ್ರೀತಿ ಹಾಗೂ ದೇವರ ಕಾರುಣ್ಯವನ್ನು ಪೋಪ್ ಫ್ರಾನ್ಸಿಸ್ ಅವರು ವಲಸಿಗರಿಗೆ ಪ್ರದರ್ಶಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ ಸೆನೆಗಲ್ ಹಾಗೂ ಗ್ಯಾಂಬಿಯಾ ದೇಶದ ವಲಸಿಗರು ಪೋಪ್ ಫ್ರಾನ್ಸಿಸ್ ನಮ್ಮ ತಂದೆಯಂತೆ ಎಂದು ಹೇಳಿದ್ದಾರೆ. ಈ ಗುಂಪಿನಲ್ಲಿ ತಮ್ಮ ನೋವಿನ ಕಥಾನಕಗಳನ್ನು ಬರೆದು ಪ್ರಕಟಿಸಿದ ಬರಹಗಾರರು ಇದ್ದರು.
ಈಗಾಗಲೇ ಹೇಳಿದ ಹಾಗೆ, ಈ ಗುಂಪಿನ ವಿಶೇಷತೆ ಎಂದರೆ ಸ್ವತಃ ವಲಸಿಗರಾಗಿದ್ದು, ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಬರಹ ರೂಪಕ್ಕಿಳಿಸಿ, ಪ್ರಕಟಿಸಿದ ಬರಹಗಾರರೂ ಸಹ ಪೋಪ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ಅವರ ಆಶೀರ್ವಾದವನ್ನು ಪಡೆದುಕೊಂಡರು.
ಇವರೆಲ್ಲರ ಭರವಸೆಯ ಕಥೆಗಳನ್ನು ಕೇಳಿ, ಪೋಪ್ ಫ್ರಾನ್ಸಿಸ್ ಅವರಿಗೆ ಪ್ರೋತ್ಸಾಹವನ್ನು ನೀಡಿದರು.