ಹುಡುಕಿ

ಯುದ್ಧ ನಿರತ ಉಕ್ರೇನ್ ದೇಶದಲ್ಲಿ ಅಲ್ಬೆರ್ಟೈನ್ ಸಿಸ್ಟರ್ಗಳ ಅನುಪಮ ಸೇವೆ

ಯುದ್ಧ ನಿರತ ಉಕ್ರೇನ್ ದೇಶದಲ್ಲಿ ಆಲ್ಬೆರ್ಟೈನ್ ಧಾರ್ಮಿಕ ಸಭೆಯ ಭಗಿನಿಯರು ಅವಶ್ಯಕವಿರುವ ಕಡೆಯೆಲ್ಲಾ ತಮ್ಮ ತನು ಮನ ಧನವನ್ನರ್ಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇರುವಿಕೆ ಉಕ್ರೇನ್ ದೇಶಕ್ಕೆ ಒಂದು ವರದಾನವಾಗಿದ್ದು, ಇಲ್ಲಿನ ಜನತೆಯ ನೋವು, ಹತಾಶೆ ಹಾಗೂ ಕಂಬನಿಗೆ ಸದಾ ಮಿಡಿಯುವ ಕ್ರಿಸ್ತನ ಪ್ರತಿರೂಪಗಳಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ವರದಿ: ಫಾದರ್ ಮಾರಿಯುಸ್ ಕ್ರವೇಕ್ ಎಸ್.ಎಸ್.ಪಿ., ಅಜಯ್ ಕುಮಾರ್

ಯುದ್ಧ ನಿರತ ಉಕ್ರೇನ್ ದೇಶದಲ್ಲಿ ಆಲ್ಬೆರ್ಟೈನ್ ಧಾರ್ಮಿಕ ಸಭೆಯ ಭಗಿನಿಯರು ಅವಶ್ಯಕವಿರುವ ಕಡೆಯೆಲ್ಲಾ ತಮ್ಮ ತನು ಮನ ಧನವನ್ನರ್ಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇರುವಿಕೆ ಉಕ್ರೇನ್ ದೇಶಕ್ಕೆ ಒಂದು ವರದಾನವಾಗಿದ್ದು, ಇಲ್ಲಿನ ಜನತೆಯ ನೋವು, ಹತಾಶೆ ಹಾಗೂ ಕಂಬನಿಗೆ ಸದಾ ಮಿಡಿಯುವ ಕ್ರಿಸ್ತನ ಪ್ರತಿರೂಪಗಳಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ ದೇಶದಲ್ಲಿ ಅಪಾರ ಸಾವು ನೋವು ಸಂಭವಿಸುತ್ತಿದೆ. ಮಕ್ಕಳೂ ಸೇರಿದಂತೆ ಹಿರಿಯರು ಹಾಗೂ ಕಿರಿಯರೆನ್ನದೆ ಎಲ್ಲರೂ ಸಹ ನೋವು ಹಾಗೂ ಆತಂಕಕ್ಕೆ ಒಳಗಾಗಿದ್ದಾರೆ. ಈ ದಿಸೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕನ್ಯಾಸ್ತ್ರೀಯರು ಜನರಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಿ, ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಕೇವಲ ಭೌತಿಕ ಸಹಾಯ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಅವರ ಜೊತೆಗಿದ್ದು, ಧೈರ್ಯ ಹಾಗೂ ಉಪಶಮನವನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ. 

29 July 2024, 21:52