ಹುಡುಕಿ

ಮಾತೆ ಮರಿಯಮ್ಮನವರ ಪ್ರಾಚೀನ ಚಿತ್ರದ 1500ನೇ ವರ್ಷಾಚರಣೆ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಗಮನ ಕೇಂದ್ರೀಕರಿಸಿದ್ದಾರೆ

ಮಾತೆ ಮರಿಯಮ್ಮನವರ ಪ್ರಾಚೀನ ಚಿತ್ರದ 1500 ವರ್ಷಾಚರಣೆ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ಧಾರ್ಮಿಕ ಸಭೆಯ ಗುರುಗಳಾದ ಫಾದರ್ ಅಂತೋನಿಯೋ ಪಿಕೋಲು ಅವರಿಗೆ ಪತ್ರವನ್ನು ಬರೆದಿದ್ದು ತಮ್ಮ ಧಾರ್ಮಿಕ ಸಭೆಯ ಪ್ರಾರ್ಥನಾ ಜೀವನವನ್ನು ಹಾಗೂ ಸೇವಾ ಮನೋಭಾವವನ್ನು ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದಾರೆ.

ವರದಿ: ಫ್ರಾನ್ಸಿಸ್ಕೋ ಮರ್ಲೋ, ಅಜಯ್ ಕುಮಾರ್

ಮಾತೆ ಮರಿಯಮ್ಮನವರ ಪ್ರಾಚೀನ ಚಿತ್ರದ 1500 ವರ್ಷಾಚರಣೆ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ಧಾರ್ಮಿಕ ಸಭೆಯ ಗುರುಗಳಾದ ಫಾದರ್ ಅಂತೋನಿಯೋ ಪಿಕೋಲು ಅವರಿಗೆ ಪತ್ರವನ್ನು ಬರೆದಿದ್ದು ತಮ್ಮ ಧಾರ್ಮಿಕ ಸಭೆಯ ಪ್ರಾರ್ಥನಾ ಜೀವನವನ್ನು ಹಾಗೂ ಸೇವಾ ಮನೋಭಾವವನ್ನು ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದಾರೆ.

ಫಾದರ್ ಅಂತೋಣಿಯು ಅವರಿಗೆ ಬರೆದ ಪತ್ರದಲ್ಲಿ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಈ ಸಂದರ್ಭ ಅತ್ಯಂತ ಸಂತೋಷದಾಯಕ ಸಂದರ್ಭ ವಾಗಿದ್ದು ನಿಮ್ಮೆಲ್ಲರ ಜೊತೆ ನಾನೂ ಸಹ ಪ್ರಾರ್ಥನೆಯಲ್ಲಿ ಒಂದಾಗಿ ಸೇರುತ್ತೇನೆ ಎಂದು ಹೇಳಿದ್ದಾರೆ.

ಪೋರ್ಟಿಕೊ ಎಂಬ ಪ್ರದೇಶದಲ್ಲಿ ಮಾತೆ ಮರಿಯಮ್ಮನವರು ಕ್ರಿಸ್ತಶಕ 522 ರಲ್ಲಿ ದರ್ಶನವನ್ನಿತ್ತ ಪರಿಣಾಮ ಅಂದಿನಿಂದ ಅಲ್ಲಿ ಭಕ್ತಿ ಆಚರಣೆ ಉಂಟಾಗಿ ಈವರೆಗೂ ಸಹ ಭಕ್ತಾದಿಗಳು ಬಹಳ ಉತ್ಕಟತೆಯಿಂದ ಹಾಗೂ ಭಕ್ತಿಯಿಂದ ಇಲ್ಲಿಗೆ ಧಾವಿಸಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಪ್ರಸ್ತುತ ಇದೊಂದು ಮಾತೆ ಮರಿಯಮ್ಮನವರ ಪುಣ್ಯಕ್ಷೇತ್ರವಾಗಿದ್ದು ಇಲ್ಲಿ ಅನೇಕ ಸೇವೆ ನಡೆಯುವ ಕಾರಣ ಇದೊಂದು ಸೇವಾ ಕೇಂದ್ರವಾಗಿಯೂ ಸಹ ಮಾರ್ಪಟ್ಟಿದೆ.

17 July 2024, 17:53