ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಪ್ರತಿ ದಿನ ಪ್ರಭುವಿನ ಅದ್ಭುತಗಳನ್ನು ಸವಿಯಿರಿ

ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸುತ್ತಾ ಪ್ರತಿ ದಿನ ನಮ್ಮ ಬದುಕಿನಲ್ಲಿ ಪ್ರಭುವಿನ ಅದ್ಭುತಗಳನ್ನು ಸವಿಯಬೇಕು ಎಂದು ಕರೆ ನೀಡಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲಿನೋ ಲುಬೋವ್, ಅಜಯ್ ಕುಮಾರ್

ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸುತ್ತಾ ಪ್ರತಿ ದಿನ ನಮ್ಮ ಬದುಕಿನಲ್ಲಿ ಪ್ರಭುವಿನ ಅದ್ಭುತಗಳನ್ನು ಸವಿಯಬೇಕು ಎಂದು ಕರೆ ನೀಡಿದ್ದಾರೆ.  

ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ಐದು ರೊಟ್ಟಿ ಹಾಗೂ ಎರಡು ಮೀನುಗಳನ್ನು ಐದು ಸಾವಿರ ಜನರಿಗೆ ಹಂಚುತ್ತಾರೆ. ಈ ಕುರಿತು ಚಿಂತನೆಯನ್ನು ನಡೆಸಿರುವ ವಿಶ್ವಗುರು ಫ್ರಾನ್ಸಿಸರು ದೇವರ ಅಧ್ಭುತಕಾರ್ಯಗಳನ್ನು ಪ್ರತಿದಿನ ನಮ್ಮ ಬದುಕಿನಲ್ಲಿ ನೆನೆದು, ಅವರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್, ಯುದ್ಧಗಳ ಕುರಿತು ಎಂದಿನಂತೆ ಎಚ್ಚರಿಕೆಯನ್ನು ನೀಡಿದ್ದು, ಯುದ್ಧಗಳು ಎಂದಿಗೂ ವಿನಾಶ ಹಾಗೂ ಎಲ್ಲರ ಸೋಲಾಗಿದ್ದು, ಶಾಂತಿಯೇ ಸರ್ವ ಸಮಸ್ಯೆಗೂ ಪರಿಹಾರ ಎಂದು ಹೇಳಿದ್ದಾರೆ. ಈ ಮೂಲಕ ಶಾಂತಿ ಸ್ಥಾಪನೆಯ ಕುರಿತ ತಮ್ಮ ಮನವಿಯನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.   

28 July 2024, 17:59