ಏಷ್ಯಾ ಹಾಗೂ ಒಶಿಯಾನಿಯಾ ಖಂಡದ ದೇಶಗಳಿಗೆ ಪೋಪ್ ಫ್ರಾನ್ಸಿಸ್ ಅವರ ಭೇಟಿಯ ವೇಳಾಪಟ್ಟಿ ಪ್ರಕಟ

ಇಂಡೋನೇಷಿಯಾ, ಪಪುವಾ ನ್ಯೂಗಿನಿ ಹಾಗೂ ಟಿಮೋರ್ ಲೆಸ್ತೇ ದೇಶಗಳಿಗೆ ಪೋಪ್ ಫ್ರಾನ್ಸಿಸ್ ಅವರು ಪ್ರೇಷಿತ ಭೇಟಿಯನ್ನು ನೀಡುತ್ತಿರುವ ಹಿನ್ನೆಲೆ ಅವರ ಪ್ರವಾಸದ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ವರದಿ: ಫ್ರಾನ್ಸಿಸ್ಕೋ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಪುವಾ ನ್ಯೂಗಿನಿ, ಟಿಮೋರ್ ಲೆಸ್ತೇ, ಇಂಡೋನೇಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದು, ಈ ಭೇಟಿಯ ಸಂಪೂರ್ಣ ವೇಳಾಪಟ್ಟಿಯನ್ನು ವ್ಯಾಟಿಕನ್ ಮಾ‌ಧ‌್ಯಮ ಕಚೇರಿಯು ಪ್ರಕಟಿಸಿದೆ.

ಎರಡು ವಾರಗಳ ಅವಧಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ನಾಲ್ಕು ದೇಶಗಳನ್ನು ಭೇಟಿ ಮಾಡಲಿದ್ದು, ಇದು ಅವರ ಪೋಪಾಧಿಕಾರದ ಅವಧಿಯ ನಲವತ್ತೈದನೇ ಪ್ರೇಷಿತ ಭೇಟಿಯಾಗಿರಲಿದೆ ಎಂದು ವರದಿಯಾಗಿದೆ. ಈಗಾಗಲೇ ಈ ದೇಶಗಳಲ್ಲಿ ಪೋಪ್ ಫ್ರಾನ್ಸಿಸ್ ಅವರ ಭೇಟಿಗೆ ಸಿದ್ಧತೆಗಳು ನಡೆದಿವೆ. ಜನರು ವಿಶ್ವಗುರುಗಳನ್ನು ಆಹ್ವಾನಿಸಲು ಉತ್ಸುಕತೆಯಿಂದ ಇದ್ದಾರೆ.

ಈ ಭೇಟಿಗಾಗಿ ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ಎರಡನೇ ತಾರೀಖು ರೋಮ್ ನಗರದಿಂದ ಹೊರಡಲಿದ್ದು, ಹದಿಮೂರನೇ ತಾರೀಖು ವಾಪಾಸಾಗಲಿದ್ದಾರೆ.

 

05 July 2024, 16:58