ಹುಡುಕಿ

ವ್ಯಾಟಿಕನ್ ನಗರದಲ್ಲಿ ಹಿರಿಯರೊಂದಿಗೆ ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಹಿರಿಯರೊಂದಿಗೆ ಪೋಪ್ ಫ್ರಾನ್ಸಿಸ್ 

ಅಜ್ಜ-ಅಜ್ಜಿಯರ, ಹಿರಿಯರ ತ್ಯಾಗ-ಸೇವೆಯನ್ನು ನೆನೆದ ಪೋಪ್ ಫ್ರಾನ್ಸಿಸ್

ಇಂದು ತಾಯಿ ಧರ್ಮಸಭೆಯು ನಾಲ್ಕನೇ ವಿಶ್ವ ಅಜ್ಜ-ಅಜ್ಜಿಯರ ಹಾಗೂ ಹಿರಿಯರ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಅಜ್ಜ-ಅಜ್ಜಿಯರಿಗಾಗಿ ವಿಶೇಷ ಬಲಿಪೂಜೆಯನ್ನು ನೀಡಿ, ಪ್ರಭೋದನೆಯಲ್ಲಿ ಅವರ ತ್ಯಾಗ, ಪ್ರೇಮ ಹಾಗೂ ಸೇವೆಯನ್ನು ಶ್ಲಾಘಿಸಿದರು.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಇಂದು ತಾಯಿ ಧರ್ಮಸಭೆಯು ನಾಲ್ಕನೇ ವಿಶ್ವ ಅಜ್ಜ-ಅಜ್ಜಿಯರ ಹಾಗೂ ಹಿರಿಯರ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಅಜ್ಜ-ಅಜ್ಜಿಯರಿಗಾಗಿ ವಿಶೇಷ ಬಲಿಪೂಜೆಯನ್ನು ನೀಡಿ, ಪ್ರಭೋದನೆಯಲ್ಲಿ ಅವರ ತ್ಯಾಗ, ಪ್ರೇಮ ಹಾಗೂ ಸೇವೆಯನ್ನು ಶ್ಲಾಘಿಸಿದರು.  

ಮುಂದುವರೆದು ಮಾತನಾಡಿದ ಅವರು ನಮ್ಮ ಕುಟುಂಬಗಳನ್ನು ಬೆಳೆಸುವುದಕ್ಕೆ ಹಾಗೂ ನಮ್ಮನ್ನು ವಿಶ್ವಾಸದಲ್ಲಿ ಬೆಳೆಸುವುದಕ್ಕೆ ಮೂಲ ಕಾರಣ ನಮ್ಮ ಅಜ್ಜ-ಅಜ್ಜಿಯರು ಹಾಗೂ ಹಿರಿಯರಾಗಿದ್ದಾರೆ. ಕುಟುಂಬಕ್ಕಾಗಿ ಅವರು ಮಾಡಿರುವ ತ್ಯಾಗ ಹಾಗೂ ಸೇವೆಗಳು ಅನುಪಮ. ಎಂದಿಗೂ ಸಹ ಅವರನ್ನು ನಾವು ಒಬ್ಬಂಟಿಯಾಗಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಅವರನ್ನು ನಾವು ಹೊರೆ ಎಂದು ಪರಿಗಣಿಸುತ್ತಿದ್ದೇವೆ. ಆದರೆ, ನಾವೆಲ್ಲರೂ ಅವರಿಂದಲೇ ಬಂದವರು ಎಂಬುದನ್ನು ನಾವು ಮರೆಯಬಾರದು.

ಈ ಸಂದರ್ಭದಲ್ಲಿ ಅವರ ತ್ಯಾಗ ಹಾಗೂ ಸೇವೆಗೆ ನಾವೆಲ್ಲರೂ ಅವರಿಗೆ ಚಪ್ಪಾಳೆಯನ್ನು ತಟ್ಟುವುದರ ಮೂಲಕ ಅವರನ್ನು ಸ್ಮರಿಸೋಣ ಹಾಗೂ ಅವರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳನ್ನು ತಿಳಿಸೋಣ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

28 July 2024, 18:13