ಹುಡುಕಿ

ಯುದ್ಧ ನಿರತ ದೇಶಗಳಿಗೆ ಒಲಂಪಿಕ್ ಸಂಧಾನವನ್ನು ತರಲಿ: ಪೋಪ್ ಫ್ರಾನ್ಸಿಸ್ ಅಭಿಮತ

ಫ್ರಾನ್ಸ್ ದೇಶದ ಪ್ಯಾರಿಸ್ ದೇಶದಲ್ಲಿ ನಡೆಯುತ್ತಿರುವ 2024 ರ ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಯುದ್ಧ ನಿರತ ದೇಶಗಳಿಗೆ ಸಂಧಾನದ ಸದವಕಾಶವನ್ನು ನೀಡಲಿ ಎಂದು ಮನವಿ ಮಾಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಫ್ರಾನ್ಸ್ ದೇಶದ ಪ್ಯಾರಿಸ್ ದೇಶದಲ್ಲಿ ನಡೆಯುತ್ತಿರುವ 2024 ರ ಒಲಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು ಯುದ್ಧ ನಿರತ ದೇಶಗಳಿಗೆ ಸಂಧಾನದ ಸದವಕಾಶವನ್ನು ನೀಡಲಿ ಎಂದು ಮನವಿ ಮಾಡಿದ್ದಾರೆ.  

ಭಾನುವಾರ ಅವರು ಎಂದಿನಂತೆ ತಮ್ಮ ತ್ರಿಕಾಲ ಪ್ರಾರ್ಥನೆಯನ್ನು ಪೂರೈಸಿದ ನಂತರ ಈ ಮಾತುಗಳನ್ನು ಆಡಿದರು.

"ಹಳೆಯ ಸಂಪ್ರದಾಯಗಳಂತೆ ಒಲಂಪಿಕ್ ಕ್ರೀಡಾಕೂಟಗಳು ಯುದ್ಧ ನಿರತ ದೇಶಗಳಿಗೆ ಸಂಧಾನದ ಸದವಕಾಶವನ್ನು ನೀಡಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ವಿಶ್ವದಲ್ಲಿ ಯುದ್ಧ ನಿಲ್ಲುವಂತೆ ಹಾಗೂ ಆ ಮೂಲಕ ಶಾಂತಿ ನೆಲೆಸುವಂತೆ ನಿರಂತರ ಮನವಿಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

"ಈ ವಾರ ಒಲಂಪಿಕ್ ಕ್ರೀಡಾಕೂಟಗಳು ನಡೆಯಲಿವೆ. ಅದಾದ ನಂತರ ಪ್ಯಾರಾಲಿಂಪಿಕ್ ಕೂಟಗಳು ನಡೆಯಲಿವೆ. ಕ್ರೀಡೆ ಎಂಬುದು ಒಂದು ರೀತಿಯ ಸಾಮಾಜಿಕ ಶಕ್ತಿಯಾಗಿದ್ದು, ಇದಕ್ಕೆ ಯುದ್ಧಗಳನ್ನು ನಿಲ್ಲಿಸುವ ಸಾಮರ್ಥ್ಯ ಇದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಎಂದಿನಂತೆ ಇಂದೂ ಸಹ ಅವರು ಶಾಂತಿ ಸ್ಥಾಪನೆಯ ಕುರಿತು ತಮ್ಮ ಮನವಿಯನ್ನು ಮತ್ತೊಮ್ಮೆ ಪುನರಾವರ್ತಿಸಿದ್ದಾರೆ.     

21 July 2024, 15:58