ಹುಡುಕಿ

Pope Francis private audience Pope Francis private audience  (ANSA)

ವಿಶ್ವಗುರುಗಳ ಜಾಗತಿಕ ಪ್ರಾರ್ಥನಾ ಜಾಲಕ್ಕೆ ಹೊಸ ನಿಯಮಗಳ ಪ್ರಕಟಣೆ

ವಿಶ್ವಗುರುಗಳ ಜಾಗತಿಕ ಪ್ರಾರ್ಥನಾ ಜಾಲವಾಗಿರುವ ಪೋಪ್ಸ್ ಪ್ರೇಯರ್ ನೆಟ್ವರ್ಕ್ ಎಂಬುದನ್ನು ಯೇಸು ಸಭೆಯ ಗುರುಗಳು ವಿಶ್ವದಾದ್ಯಂತ ಸುಮಾರು 89 ದೇಶಗಳಲ್ಲಿ ನಡೆಸುತ್ತಿದ್ದಾರೆ. ಇದರ ಹೊಣೆಗಾರಿಕೆಯನ್ನು ವ್ಯಾಟಿಕನ್ ಪ್ರತಿಷ್ಠಾನವು ಹೊಂದಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ಫ್ರಾನ್ಸಿಸ್ ಅವರು ಅನುಮೋದಿಸಿ ಪ್ರಕಟಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರುಗಳ ಜಾಗತಿಕ ಪ್ರಾರ್ಥನಾ ಜಾಲವಾಗಿರುವ ಪೋಪ್ಸ್ ಪ್ರೇಯರ್ ನೆಟ್ವರ್ಕ್ ಎಂಬುದನ್ನು ಜೆಸುಯಿಟ್ ಸಭೆಯ ಗುರುಗಳು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಸುಮಾರು 89 ದೇಶಗಳಲ್ಲಿ ಸಕ್ರಿಯವಾಗಿರುವ ಈ ಸಂಸ್ಥೆಯು, ಪ್ರತಿ ತಿಂಗಳು ಪೋಪ್ ಫ್ರಾನ್ಸಿಸ್ ರವರ ತಿಂಗಳ ಪ್ರಾರ್ಥನಾ ಉದ್ದೇಶವನ್ನು ಜಗತ್ತಿನಾದ್ಯಂತ ಪಸರಿಸುವ ಮೂಲಕ, ಎಲ್ಲರೂ ಆ ಕುರಿತು ಪ್ರಾರ್ಥಿಸುವಂತೆ ಪ್ರೇರೇಪಿಸುತ್ತಿದ್ದಾರೆ.

ಇದರ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ವ್ಯಾಟಿಕನ್ ಫೌಂಡೇಶನ್, ಇದು ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅದಕ್ಕೆ ಹೊಸ ನಿಯಮಗಳನ್ನು ಸೇರ್ಪಡಿಸಲಾಗಿದೆ ಹಾಗೂ ಫ್ರಾನ್ಸಿಸ್ ಅವರ ಅನುಮೋದನೆಯ ನಂತರ ಅವುಗಳನ್ನು ಪ್ರಕಟಿಸಲಾಗಿದೆ.

ಜಗತ್ತಿನಾದ್ಯಂತ ಜನರು ಮಾನವೀಯತೆ ಹಾಗೂ ಧರ್ಮಸಭೆಯ ಕುರಿತ ಹಾಗೂ ಆ ನಿಟ್ಟಿನಲ್ಲಿ ಅನುಭವಿಸುತ್ತಿರುವ ಸವಾಲುಗಳನ್ನು ಪ್ರಾರ್ಥನೆ ಹಾಗೂ ಸಕ್ರಿಯ ಪ್ರತ್ಯುತ್ತರದ ಮೂಲಕ ಎದುರಿಸುವಂತೆ ಜಾಗೃತಿ ಮೂಡಿಸುವುದು ಹಾಗೂ ಅವರನ್ನು ಪ್ರೇರೇಪಿಸಿ ಹುರಿದುಂಬಿಸುವುದು ವಿಶ್ವಗುರುಗಳ ಪ್ರಾರ್ಥನಾ ಜಾಲದ ಪ್ರಮುಖ ಉದ್ದೇಶವಾಗಿದೆ.

ಪ್ರಸ್ತುತ ಈ ಪ್ರತಿಷ್ಠಾನವು ವಿಶ್ವದಾದ್ಯಂತ ಸುಮಾರು 89 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನು 1844 ರಲ್ಲಿ ಸ್ಥಾಪಿಸಲಾಗಿದೆ.

08 July 2024, 15:40