ಬೆಲ್ಜಿಯಂ ಹಾಗೂ ಲಕ್ಸೆಂಬರ್ಗ್ ದೇಶಗಳಿಗೆ ಪೋಪ್ ಭೇಟಿಯ ವೇಳಾಪಟ್ಟಿ ಬಿಡುಗಡೆ
ವರದಿ: ವ್ಯಾಟಿಕನ್ ನ್ಯೂಸ್
ಸೆಪ್ಟೆಂಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಲಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳಲಿದ್ದು, ಅವರ ಭೇಟಿಯ ಸಂಪೂರ್ಣ ವೇಳಾಪಟ್ಟಿಯನ್ನು ವ್ಯಾಟಿಕನ್ ಪ್ರಕಟಿಸಿದೆ.
ವ್ಯಾಟಿಕನ್ನಿನ ಮಾಧ್ಯಮ ಪೀಠವು ಈ ದೇಶಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಕುರಿತು ವಿಸ್ಕೃತವಾದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜನರನ್ನು ಭೇಟಿ ಮಾಡಿ ಬಲಿಪೂಜೆಗಳನ್ನು ಅರ್ಪಿಸುವುದರ ಜೊತೆಗೆ ಪೋಪ್ ಫ್ರಾನ್ಸಿಸ್ ಅವರು ಈ ಎರಡೂ ದೇಶಗಳ ಧರ್ಮಾಧ್ಯಕ್ಷ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮಾತ್ರವಲ್ಲದೆ ಅವರ ದೇಶದ ಸಮಕಾಲೀನ ಧರ್ಮಸಭೆಯ ಬೆಳವಣಿಗೆ ಹಾಗೂ ಆಗುಹೋಗುಗಳ ಕುರಿತು ಸಮಾಲೋಚನೆಯನ್ನು ಸಹ ನಡೆಸಲಿದ್ದಾರೆ.
ಇದನ್ನೂ ಸಹ ಒಳಗೊಂಡಂತೆ ಪ್ರಮುಖ ರಾಜಕೀಯ ನಾಯಕರು ಹಾಗೂ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಅವರು ಚರ್ಚೆ ನಡೆಸಲಿದ್ದಾರೆ ಎಂದು ಈ ಪ್ರಕಟಣೆಯು ತಿಳಿಸಿದೆ.