ಪೋಪ್ ಫ್ರಾನ್ಸಿಸ್: ನಿಮ್ಮ ಯೌವನ ಯೇಸುವಿಗೆ ಉಡುಗೊರೆ ಆಗಬೇಕು

ಪರಗ್ವೆ ದೇಶದಲ್ಲಿ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಯೇಸು ಕ್ರಿಸ್ತರು ನಿಮ್ಮನ್ನು ಪ್ರಭಾವಿಸುವಂತೆ ಅವಕಾಶವನ್ನು ನೀಡಿ. ನಿಮ್ಮ ಜೀವನವನ್ನು ಅವರಿಗೆ ಉಡುಗೊರೆಯಂತೆ ಜೀವಿಸಿ ಎಂದು ಹೇಳಿದ್ದಾರೆ.

ವರದಿ: ಡೀಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

"ನಿಮ್ಮ ಸ್ವಾಭಾವಿಕ ಸಕಾರಾತ್ಮಕತೆಯನ್ನು ಯೇಸು ನಿಜವಾದ ಪ್ರೀತಿಯನ್ನಾಗಿ ಪರಿವರ್ತಿಸಲಿ. ಈ ಪ್ರೀತಿ ಪ್ರಾಮಾಣಿಕವಾಗಿರಲಿ ಹಾಗೂ ತ್ಯಾಗಮಯವಾಗಿರಲಿ" ಎನ್ನುತ್ತಾ ವಿಶ್ವಗುರು ಫ್ರಾನ್ಸಿಸ್ವರು ನೆರೆದಿದ್ದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಪರಗ್ವೆ ದೇಶದಲ್ಲಿ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಯೇಸು ಕ್ರಿಸ್ತರು ನಿಮ್ಮನ್ನು ಪ್ರಭಾವಿಸುವಂತೆ ಅವಕಾಶವನ್ನು ನೀಡಿ. ನಿಮ್ಮ ಜೀವನವನ್ನು ಅವರಿಗೆ ಉಡುಗೊರೆಯಂತೆ ಜೀವಿಸಿ ಎಂದು ಹೇಳಿದ್ದಾರೆ.

"ನಮ್ಮ ಜೀವಮಾನ ಕಾಲದಲ್ಲಿ ನಾವು ಬಿದ್ದಾಗ ನಮ್ಮನ್ನು ಕಂಡು ಆಧರಿಸಿ ನಮ್ಮನ್ನು ಕೈಹಿಡಿದು ಎತ್ತಲು ಬರುವ ಪ್ರಭುವನ್ನು ಕಂಡು ಎಂದಿಗೂ ಭಯಭೀತರಾಗಬೇಡಿ. ಅವರನ್ನು ನಿಮ್ಮ ಜೀವನದಲ್ಲಿ ಅದ್ಭುತಗಳನ್ನು ಮಾಡಲು ಅವಕಾಶ ನೀಡಿ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ನಮ್ಮ ಬಾಳ ಪಯಣದಲ್ಲಿ ಮಾತೆ ಮರಿಯಮ್ಮನವರು ನಮ್ಮ ಸಂಗಡ ಇದ್ದು ನಮಗಾಗಿ ಪ್ರಾರ್ಥಿಸುತ್ತಾರ ಎಂದು ಹೇಳಿದರು.

17 July 2024, 17:48