ಹುಡುಕಿ

ಟ್ರಿಯೆಸ್ಟೆಯಲ್ಲಿ ಪೋಪ್: ಪ್ರಜಾಪ್ರಭುತ್ವದ ಗಾಯಗೊಂಡ ಹೃದಯವನ್ನು ಗುಣಪಡಿಸಲು ಕರೆ ಹೊಂದಿದ್ದೇವೆ

ಟ್ರಿಯೆಸ್ತೆಯಲ್ಲಿ ಪೋಪ್ ಫ್ರಾನ್ಸಿಸ್ ಐವತ್ತನೇ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನ ತಮ್ಮ ಕೊನೆಯ ಪ್ರಭೋದನೆಯನ್ನು ನೀಡಿದ್ದಾರೆ. ಭಾಗವಹಿಸುವ ಮೂಲಕ ಹಾಗೂ ರಾಜಕೀಯ ಔದಾರ್ಯತೆಯಿಂದ ಗಾಯಗೊಂಡಿರುವ ಪ್ರಜಾಪ್ರಭುತ್ವದ ಹೃದಯವನ್ನು ಗುಣಪಡಿಸಲು ಕರೆ ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಇಟಾಲಿಯನ್ ಕಥೋಲಿಕ ಸಾಮಾಜಿಕ ವಾರ ಆಚರಣೆಯ ಕೊನೆಯ ದಿನದಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಇಟಲಿಯ ಟ್ರಿಯೆಸ್ತೆ ಎಂಬಲ್ಲಿಗೆ ಪಯಣಿಸಿದರು. ಟ್ರಿಯೆಸ್ತೆಯಲ್ಲಿ ಪೋಪ್ ಫ್ರಾನ್ಸಿಸ್ ಐವತ್ತನೇ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನ ತಮ್ಮ ಕೊನೆಯ ಪ್ರಭೋದನೆಯನ್ನು ನೀಡಿದ್ದಾರೆ. ಭಾಗವಹಿಸುವ ಮೂಲಕ ಹಾಗೂ ರಾಜಕೀಯ ಔದಾರ್ಯತೆಯಿಂದ ಗಾಯಗೊಂಡಿರುವ ಪ್ರಜಾಪ್ರಭುತ್ವದ ಹೃದಯವನ್ನು ಗುಣಪಡಿಸಲು ಕರೆ ನೀಡಿದ್ದಾರೆ.

ಇದರಲ್ಲಿ ಭಾಗವಹಿಸಿದ ಇಟಲಿಯ ವಿವಿಧ ಧರ್ಮಕ್ಷೇತ್ರಗಳಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ ಪೋಪ್ ಫ್ರಾನ್ಸಿಸ್ ಅವರು ಪ್ರಜಾಫ್ರಭುತ್ವದ ಪ್ರಕ್ರಿಯೆಯನ್ನು ಹೇಗೆ ಜೀವಂತಗೊಳಿಸಬೇಕು ಎಂಬುದರ ಕುರಿತು ತಿಳಿ ಹೇಳಿದರು. ೧೯೦೨ ರಲ್ಲಿ ನಡೆದ ಮೊದಲ ಇಟ್ಯಾಲಿಯನ್ ಕಥೋಲಿಕ ವಾರವನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸ್ ಅವರು ಅದರ ನಂತರ ನಡೆದ ಎಲ್ಲಾ ಸಾಮಾಜಿಕ ಕಥೋಲಿಕ ವಾರಗಳು ಇಟಲಿಯ, ವಿಶೇಷವಾಗಿ ಎರಡನೇ ಮಹಾಯುದ್ಧದ ನಂತರ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ತಮ್ಮದೇ ಕಾಣಿಕೆ ನೀಡಿವೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಹೇಗೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಆನಂದಿಸಬಹುದು, ಈಗಾಗಲೇ ಅದರ ಹೃದಯಕ್ಕೆ ಆಗಿರುವ ಗಾಯಗಳನ್ನು ವಾಸಿಮಾಡಬಹುದು ಎಂದು ಹೇಳಿದರು.

07 July 2024, 16:16