ಟ್ರಿಯೆಸ್ಟೆಯ ಬಲಿಪೂಜೆಯಲ್ಲಿ ಪೋಪ್: ನಮಗೆ ವಿಶ್ವಾಸದ "ಹಗರಣ" ಬೇಕು
ಇಟಾಲಿಯನ್ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನದಂದು ಪೋಪ್ ಫ್ರಾನ್ಸಿಸ್ ಬಲಿಪೂಜೆಯನ್ನು ಅರ್ಪಿಸಿದರು.
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಇಟಾಲಿಯನ್ ಕಥೋಲಿಕ ಸಾಮಾಜಿಕ ವಾರ ಆಚರಣೆಯ ಕೊನೆಯ ದಿನದಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಇಟಲಿಯ ಟ್ರಿಯೆಸ್ತೆ ಎಂಬಲ್ಲಿಗೆ ಪಯಣಿಸಿದರು. ಟ್ರಿಯೆಸ್ತೆಯಲ್ಲಿ ಪೋಪ್ ಫ್ರಾನ್ಸಿಸ್ ಐವತ್ತನೇ ಕಥೋಲಿಕ ಸಾಮಾಜಿಕ ವಾರದ ಆಚರಣೆಯ ಕೊನೆಯ ದಿನ ತಮ್ಮ ಕೊನೆಯ ಪ್ರಭೋದನೆಯನ್ನು ನೀಡಿದ್ದಾರೆ.
ಬಲಿಪೂಜೆಯನ್ನರ್ಪಿಸುತ್ತಾ ಪ್ರಭೋದನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಈ ದುರಿತ ಕಾಲದಲ್ಲಿ ನಮಗೆ ಬೇಕಾಗಿರುವುದು ಯಾವುದೇ ಪ್ರಾಪಂಚಿಕ ಹಗರಣಗಳಲ್ಲ, ಬದಲಿಗೆ "ವಿಶ್ವಾಸದ ಹಗರಣ" ಎಂದು ಹೇಳಿದ್ದಾರೆ. ಪ್ರಭು ಕ್ರಿಸ್ತರೂ ಸಹ ತಮ್ಮ ಜೀವಿತಾವಧಿಯಲ್ಲಿ ಮಾನವೀಯತೆಯ ಕಾರಣಕ್ಕೆ ಬಹಿಷ್ಕಾರವನ್ನು ಅನುಭವಿಸಿದ್ದರು ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು "ನಮಗೆ ಪ್ರಾಪಂಚಿಕ ನೋವು ಹಾಗೂ ನ್ಯೂನ್ಯತೆಗಳನ್ನು ಮರೆಸುವ, ನಮ್ಮನ್ನು ದೇವರಲ್ಲಿ ಐಕ್ಯವಾಗಿಸುವ ವಿಶ್ವಾಸವೆಂಬ ಹಗರಣದ ಅವಶ್ಯಕತೆ ಇದೆ ಎಂದು ಹೇಳಿದರು.
07 July 2024, 16:19