ಪೋಪ್ ಫ್ರಾನ್ಸಿಸ್: ಯೇಸುವಿನಲ್ಲಿರುವ ಜೀವಂತ ರೊಟ್ಟಿಯೆಂಬ ಉಡುಗೊರೆಯನ್ನು ನಾವು ಪಡೆದುಕೊಳ್ಳಬೇಕು

ಭಾನುವಾರ ವ್ಯಾಟಿಕನ್ ನಗರದಲ್ಲಿ ಎಂದಿನಂತೆ ದೇವದೂತನ ಸಂದೇಶ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಮಾತನಾಡಿದ ಪೋಪ್ ಫ್ರಾನ್ಸಿಸ್ "ಯೇಸುವಿನಲ್ಲಿರುವ ಜೀವಂತ ರೊಟ್ಟಿಯೆಂಬ ಉಡುಗೊರೆಯನ್ನು ನಾವು ಪಡೆದುಕೊಳ್ಳಬೇಕು." ಎಂದು ಹೇಳಿದ್ದಾರೆ.

ವರದಿ: ಥದ್ದೆಯೂಸ್ ಜೋನ್ಸ್, ಅಜಯ್ ಕುಮಾರ್

ಭಾನುವಾರ ವ್ಯಾಟಿಕನ್ ನಗರದಲ್ಲಿ ಎಂದಿನಂತೆ ದೇವದೂತನ ಸಂದೇಶ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಮಾತನಾಡಿದ ಪೋಪ್ ಫ್ರಾನ್ಸಿಸ್ "ಯೇಸುವಿನಲ್ಲಿರುವ ಜೀವಂತ ರೊಟ್ಟಿಯೆಂಬ ಉಡುಗೊರೆಯನ್ನು ನಾವು ಪಡೆದುಕೊಳ್ಳಬೇಕು." ಎಂದು ಹೇಳಿದ್ದಾರೆ.

ಇಂದಿನ ಶುಭಸಂದೇಶದ ಮೇಲೆ ಚಿಂತನೆಯನ್ನು ನಡೆಸುತ್ತಾ ಮಾತನಾಡಿದ ಅವರು "ಯೇಸುವೇ ಜೀವಂತ ರೊಟ್ಟಿ" ಎಂಬುದರ ಕುರಿತು ಧ್ಯಾನಿಸಿದರು.

"ರೊಟ್ಟಿ ಹಾಗೂ ರಸದ ರೂಪದಲ್ಲಿ ನಾವು ಯೇಸುಕ್ರಿಸ್ತರ ದೇಹ ಹಾಗೂ ರಕ್ತವನ್ನು ಸೇವಿಸುವಾಗ ಅವರು ನಮ್ಮೊಳಗೆ ಬಂದು ನಮ್ಮನ್ನು ಕರುಣೆಯಲ್ಲಿ ಬೆಳಗುತ್ತಾರೆ. ಇದು ನಮಗೆ ದೈಹಿಕವಾಗಿ ಮಾತ್ರವಲ್ಲ, ಆಧ್ಯಾತ್ಮಿಕ ಆಹಾರವಾಗಿಯೂ ಹಾಗೂ ಪೋಷಣೆಯೂ ಸಹ ಆಗಿದೆ" ಎಂದು ಪೋಪ್ ಫ್ರಾನ್ಸಿಸ್ ನೆರೆದಿದ್ದ ಭಕ್ತಾಧಿಗಳೊಂದಿಗೆ ತಮ್ಮ ಚಿಂತನೆಯನ್ನು ಹಂಚಿಕೊಂಡರು.

18 August 2024, 16:24