ಕಥೋಲಿಕ ಶಾಸಕ, ಸಂಸದರೊಂದಿಗೆ ಪೋಪ್ ಮಾತುಕತೆ; ಯುದ್ಧಗ್ರಸ್ಥ ವಿಶ್ವಕ್ಕೆ ಶಾಂತಿ ಬೇಕಿದೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಇಂಟರ್ನ್ಯಾಷನಲ್ ಕ್ಯಾಥೋಲಿಕ್ ಲೆಜಿಸ್ಲೇಟರ್ಸ್ ನೆಟ್ವರ್ಕ್ ಸಂಸ್ಥೆಯ ಸದಸ್ಯರೊಂದಿಗೆ ವ್ಯಾಟಿಕನ್ ನಗರದಲ್ಲಿ ಮಾತುಕತೆಯನ್ನು ನಡೆಸಿದರು. ಅವರೊಂದಿಗಿನ ಚರ್ಚೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಯುದ್ಧಗ್ರಸ್ಥ ದೇಶಕ್ಕೆ ಅತ್ಯಂತ ತುರ್ತಾಗಿ ಶಾಂತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ಕಥೋಲಿಕರು ಕಾರ್ಗತ್ತಲಿನ ಕಾರ್ಮೋಡದ ನಡುವೆಯು ಭರವಸೆಯ ಬೆಳಕನ್ನು ಆಶಿಸಲು ಹಾಗೂ ಅದಕ್ಕಾಗಿ ಎದುರು ನೋಡುವ ಕರೆಯನ್ನು ಹೊಂದಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಈ ನಿಟ್ಟಿನಲ್ಲಿ ಎಲ್ಲರನ್ನೂ ಹುರಿದುಂಬಿಸುವಲ್ಲಿ ಕ್ರೈಸ್ತರೆಲ್ಲರೂ ಒಂದಾಗಬೇಕು" ಎಂದು ಹೇಳಿದ್ದಾರೆ.
ಇಂಟರ್ನ್ಯಾಷನಲ್ ಕ್ಯಾಥೋಲಿಕ್ ಲೆಜಿಸ್ಲೇಟರ್ಸ್ ನೆಟ್ವರ್ಕ್ ಸಂಸ್ಥೆಯ ಹದಿನೈದನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರಸ್ತುತ ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ವಿಶ್ವಗುರು ಫ್ರಾನ್ಸಿಸ್ ಮಾತನಾಡಿ, ಈಗಾಗಲೇ ಪ್ರಪಂಚದ ವಿವಿಧೆಡೆಯಲ್ಲಿ ಆರಂಭವಾಗಿರುವ ಯುದ್ಧಗಳು ಮೂರನೇ ವಿಶ್ವಯುದ್ಧದ ಭಾಗವೇ ಆಗಿದೆ. ಹೀಗೆ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭವಿಷ್ಯ ಭಯಾನಕವಾಗಿರುತ್ತದೆ ಎಂದು ಹೇಳಿದ್ದಾರೆ.