ಹುಡುಕಿ

ನೈಟ್ಸ್ ಆಫ್ ಕೊಲಂಬಸ್ ಅವರಿಗೆ ಪೋಪ್ ಫ್ರಾನ್ಸಿಸ್: ಕ್ರಿಸ್ತರ ಶಾಂತಿಯ ವಿಜಯಕ್ಕಾಗಿ ಪ್ರಾರ್ಥಿಸಿರಿ

ಕೆನಡಾದ ಕೆಬೆಕ್ ನಗರದಲ್ಲಿ ತಮ್ಮ 142ನೇ ಸ್ಥಾಪನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಗೆ ಪತ್ರವನ್ನು ಬರೆದಿರುವ ವಿಶ್ವಗುರು ಫ್ರಾನ್ಸಿಸ್ ಅವರು ಕ್ರಿಸ್ತರ ಶಾಂತಿಯ ವಿಜಯಕ್ಕಾಗಿ ಪ್ರಾರ್ಥಿಸಬೇಕೆಂದು ಅವರಿಗೆ ಕರೆ ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಕೆನಡಾದ ಕೆಬೆಕ್ ನಗರದಲ್ಲಿ ತಮ್ಮ 142ನೇ ಸ್ಥಾಪನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಗೆ ಪತ್ರವನ್ನು ಬರೆದಿರುವ ವಿಶ್ವಗುರು ಫ್ರಾನ್ಸಿಸ್ ಅವರು ಕ್ರಿಸ್ತರ ಶಾಂತಿಯ ವಿಜಯಕ್ಕಾಗಿ ಪ್ರಾರ್ಥಿಸಬೇಕೆಂದು ಅವರಿಗೆ ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ನೈಟ್ಸ್ ಆಫ್ ಕೊಲಂಬಸ್ ಸ್ಥಾಪಕರಾದ ಪುನೀತ ಮೈಕಲ್ ಮ್ಯಾಕ್ಗಿವ್ನಿ ಅವರು ಸುಮಾರು 140 ವರ್ಷಗಳ ಹಿಂದೆ ವಿಶ್ವದಲ್ಲೇಡೆ ಕ್ರಿಸ್ತರ ಸಂದೇಶವನ್ನು ಸಾರಲು ಹಾಗೂ ಅವರ ತತ್ವಗಳನ್ನು ಪಸರಿಸಲು ಇಂತಹ ಒಂದು ಸಂಸ್ಥೆಯನ್ನು ದೂರ ದೃಷ್ಟಿಯಿಂದ ಸ್ಥಾಪಿಸಿದರು. ಬಡವರ ಹಾಗೂ ನಿರ್ಗತಿಕರ ಕಾಳಜಿಗಾಗಿ ಅವರು ಸ್ಥಾಪಿಸಿದ ಈ ಸಂಸ್ಥೆಯು ವಿವಿಧ ರೀತಿಯಲ್ಲಿ ಸದಾ ನೆರವಾಗುತ್ತಾ ಬಂದಿದೆ. ಧರ್ಮಸಭೆಯ ಪಾಲನೆಯಲ್ಲಿ ಮುಂದುವರಿಯುತ್ತಿರುವ ಈ ಸಂಸ್ಥೆಗೆ ಐತಿಹಾಸಿಕ ಮಹತ್ವವಿದ್ದು, ಇದು ಮತ್ತಷ್ಟು ಉತ್ತಮ ನಿಟ್ಟಿನಲ್ಲಿ ಮುಂದುವರಿಯಬೇಕಿದೆ." ಎಂದು ಹೇಳಿದರು.

ಈ ಸಂಸ್ಥೆಯ ಸದಸ್ಯರು ಸಂಸಾರಿಕ ಜೀವನವನ್ನು ನಡೆಸುತ್ತಿದ್ದು ತಮ್ಮ ಎಲ್ಲಾ ಜವಾಬ್ದಾರಿಗಳ ನಡುವೆಯೂ ಸಹ ಇದರ ಒಂದು ಸಾಮಾಜಿಕ ಸೇವಾ ಕಾರ್ಯಕ್ಕಾಗಿ ಸಮಯವನ್ನು ಮೀಸಲಿಟ್ಟು ಅದನ್ನು ಚಾಚು ತಪ್ಪದೇ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಇವರ ಈ ಸೇವೆ ಹಾಗೂ ತ್ಯಾಗವು ಶುಭ ಸಂದೇಶದಿಂದ ಪ್ರೇರಿತವಾಗಿದ್ದು, ಇದಕ್ಕೆ ನಮ್ಮ ಪ್ರಾರ್ಥನೆ ಹಾಗೂ ಶುಭಾಶಯಗಳು ಸದಾ ಸಲ್ಲುತ್ತವೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

08 August 2024, 18:22