ಕ್ರಿಸ್ತರಿಂದ ಬರುವ ಶಾಂತಿಗಾಗಿ ಮಾತೆ ಮರಿಯಮ್ಮನವರ ಭಿನ್ನಹವನ್ನು ಬೇಡಿದ ಪೋಪ್ ಫ್ರಾನ್ಸಿಸ್

ರೋಮ್ ನಗರದ ಐದು ಪೋಪರ ಮಹಾದೇವಾಲಯಗಳಲ್ಲೊಂದಾದ ಬಸಿಲಿಕ ಆಫ್ ಸೇಂಟ್ ಮೇರಿ ಮೇಜರ್ ಮಹಾದೇವಾಲಯದ ವಾರ್ಷಿಕೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಕ್ರಿಸ್ತರಿಂದ ಬರುವ ಶಾಂತಿಗಾಗಿ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಕ್ರಿಸ್ತ ಶಕ 358 ರಲ್ಲಿ ರೋಮ್ ನಗರದಲ್ಲಿ ಮಾತೆ ಮರಿಯಮ್ಮನವರು ಅಂದಿನ ಪೋಪರಾದ ಲಿಬೇರಿಯುಸ್ ಹಾಗೂ ರೋಮ್ ನಗರದ ದಂಪತಿಗಳಿಗೆ ಕಾಣಿಸಿಕೊಂಡು ಆ ಪ್ರದೇಶದಲ್ಲಿ ಒಂದು ದೇವಾಲಯವನ್ನು ನಿರ್ಮಿಸುವಂತೆ ಹೇಳುತ್ತಾರೆ. ಈ ದೇವಾಲಯವು ಅದ್ಭುತಗಳ ತಾಣವಾಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಪ್ರತಿ ವರ್ಷ ರೋಮ್ ನಗರದ ಬಿರು ಬೇಸಿಗೆಯಲ್ಲೂ ಈ ದೇವಾಲಯದ ಮೇಲೆ ಮಂಜು ಆವರಿಸುತ್ತದೆ!

ಈ ವರ್ಷ ಪೋಪ್ ಫ್ರಾನ್ಸಿಸ್ ಅವರು ಸ್ವತಃ ಇಲ್ಲಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ತರಿಂದ ಬರುವ ಶಾಂತಿಗಾಗಿ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಿದ್ದಾರೆ.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ದೇವರಿಂದ ಬರುವ ಎಲ್ಲಾ ವರದಾನಗಳ ಮಧ್ಯವರ್ತಿಯಾಗಿದ್ದಾರೆ. ಭಕ್ತಾಧಿಗಳಿಗೆ ಅನಂತ ದೇವರ ವರಪ್ರಸಾದಗಳನ್ನು ಕರುಣಿಸಿಕೊಡುವ ತಾಯಿಯಾಗಿದ್ದಾರೆ ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ಅವರು ಈ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಲ್ಲಿ ಸಾಂಭ್ರಮಿಕ ಬಲಿಪೂಜೆಯನ್ನು ಅರ್ಪಿಸಿದರು.

06 August 2024, 18:25