ಪೀಠ ಸೇವಕರಿಗೆ ಪೋಪ್: ಯೇಸುವನ್ನು ಇತರರೊಂದಿಗೆ ಹಂಚಿಕೊಳ್ಳಿ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಪೀಠ ಸೇವಕರ ಅಂತರಾಷ್ಟ್ರೀಯ ಪುಣ್ಯಯಾತ್ರೆಯಲ್ಲಿ ಭಾಗವಹಿಸಿದ ಪೀಠ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಬಲಿಪೂಜೆಯಲ್ಲಿನ ಕ್ರಿಸ್ತರನ್ನು ಇತರರೊಂದಿಗೆ ಹಂಚಿಕೊಳ್ಳಿ ಎಂದು ಅವರಿಗೆ ಕರೆ ನೀಡಿದ್ದಾರೆ.
ಜರ್ಮನಿ, ಫ್ರಾನ್ಸ್, ಇಟಲಿ ಸೇರಿದಂತೆ ಯೂರೋಪ್ ಖಂಡದಾದ್ಯಂತ ವಿವಿಧ ದೇಶಗಳಿಂದ ಸುಮಾರು 70,000 ಪೀಠ ಸೇವಕರು ಈ ಪುಣ್ಯಯಾತ್ರೆಯಲ್ಲಿ ಭಾಗವಹಿಸಿದ್ದರು. ಇವರನ್ನು ಉದ್ದೇಶಿಸಿ ಸಂತ ಪೇತ್ರರ ಚೌಕದಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು.
ನೆರೆದಿದ್ದ ಎಲ್ಲರಿಗೂ ಬಲಿಪೂಜೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಬಲಿಪೂಜೆಯಲ್ಲಿ ಕ್ರಿಸ್ತರು ರೊಟ್ಟಿ ಹಾಗೂ ರಸಗಳಲ್ಲಿ ಜೀವಂತವಾಗುತ್ತಾರೆ. ಅವರನ್ನು ಸೇವಿಸುವಾಗ ಅವರು ಭೌತಿಕವಾಗಿಯೂ ಹಾಗೂ ಆಧ್ಯಾತ್ಮಿಕವಾಗಿಯೂ ನಮ್ಮೊಳಗೆ ಜೀವಿಸಲಿದ್ದಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು "ಯೇಸುಕ್ರಿಸ್ತರನ್ನು ಎಲ್ಲರೊಂದಿಗೂ ನೀವು ಹಂಚಿಕೊಳ್ಳಬೇಕು" ಎಂದು ಹೇಳಿದರು.