ಪೋಪ್ ಫ್ರಾನ್ಸಿಸ್: ಬದುಕಿನ ಸಂಪೂರ್ಣತೆಗಾಗಿ ಪ್ರಭುವಿನಲ್ಲಿ ಒಂದಾಗಿರಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಎಂದಿನಂತೆ ತಮ್ಮ ಭಾನುವಾರದ ದೇವದೂತನ ಸಂದೇಶವನ್ನು ಪ್ರಾರ್ಥಿಸಿ, ಭಕ್ತಾಧಿಗಳಿಗೆ ಚಿಂತನೆಯನ್ನು ನೀಡಿದ್ದಾರೆ. ತಮ್ಮ ಚಿಂತನೆಯಲ್ಲಿ ಅವರು ಬದುಕಿನ ಸಂಪೂರ್ಣತೆಗಾಗಿ ಪ್ರಭುವಿನಲ್ಲಿ ನಾವು ಸದಾ ಒಂದಾಗಿರಬೇಕು ಎಂದು ಹೇಳಿದ್ದಾರೆ.
ಇಂದಿನ ಶುಭಸಂದೇಶದಲ್ಲಿ ಸಂತ ಪೇತ್ರರ ವಿಶ್ವಾಸ ಪ್ರಮಾಣದ ನುಡಿಗಳ ಮೇಲೆ ಬೆಳಕನ್ನು ಚೆಲ್ಲುತ್ತಾ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂತ ಪೇತ್ರರು, ಪ್ರಭೂ, ನಾವು ಯಾರ ಬಳಿಗೆ ಹೋಗುವುದು? ನಿತ್ಯ ಜೀವದ ವಾಕ್ಯಗಳು ನಿಮ್ಮಲ್ಲಿರುವಾಗ?" ಎಂದು ಹೇಳುವ ಮೂಲಕ ನಮಗೆ ಯೇಸು ಕ್ರಿಸ್ತರೇ ಪರಮೋನ್ನತ ಆದರ್ಶ ಎಂಬುದನ್ನು ನಿರೂಪಿಸುತ್ತಾರೆ ಎಂದು ಹೇಳಿದರು.
ಅಂದು ಯೇಸುವಿನ ಶಿಷ್ಯರಿಗೆ ಅವರನ್ನು ಹಿಂಬಾಲಿಸುವುದು ಸುಲಭವಾಗಿರಲಿಲ್ಲ ಏಕೆಂದರೆ ಅನೇಕ ಬಾರಿ ಯೇಸುವಿನ ಮಾತುಗಳು ಅವರಿಗೆ ಅರ್ಥವಾಗುತ್ತಿರಲಿಲ್ಲ. ಅದೇ ರೀತಿ ನಾವೂ ಸಹ ಕೆಲವೊಮ್ಮೆ ಪ್ರಭುವಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಅಂತಹ ಸಂಧರ್ಭಗಳಲ್ಲಿ ನಾವು ಸದಾ ಪ್ರಾರ್ಥಿಸಬೇಕು. ಪ್ರಾರ್ಥನೆಯ ಮೂಲಕ ನಮ್ಮ ಬದುಕಿನಲ್ಲಿ ದೇವರ ಚಿತ್ತವನ್ನು ಅರ್ಥೈಸಿಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.