ಚೀನಾ ಜನತೆಗೆ ಭರವಸೆಯ ಸಂದೇಶವನ್ನು ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಇಸಾಬೆಲ್ಲಾ ಪೀರೋ, ಅಜಯ್ ಕುಮಾರ್
ಚೀನಾ ಪ್ರಾಂತ್ಯದ ಯೇಸು ಸಭೆಯ ಗುರುಗಳೊಂದಿಗೆ ಆನ್ಲೈನ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಚೀನಾ ಜನತೆ "ಮಹಾ ಜನತೆಯಾಗಿದ್ದು" ಅವರು ತಮ್ಮ ಪರಂಪರೆಯಿಂದ ಎಂದೂ ಹಿಂದೆ ಸರಿಯಬಾರದು ಎಂದು ಹೇಳಿದ್ದಾರೆ. ಅವರ ಈ ಸಮಾಲೋಚನೆಯ ಮುಖ್ಯಾಂಶಗಳನ್ನು ವ್ಯಾಟಿಕನ್ ನ್ಯೂಸ್ ಇಲ್ಲಿ ಪ್ರಕಟಿಸಿದೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಚೀನಾ ದೇಶಕ್ಕೆ ಭೇಟಿ ನೀಡುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದು, ಅಲ್ಲಿನ ಸೋಂಗ್ಜಾಂಗ್ ಜಿಲ್ಲೆಯಲ್ಲಿನ ಶೇಹ್ಸಾನ್ ಮಾತೆಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಪೋಪಾಧಿಕಾರದ ಕುರಿತು ಮಾತನಾಡಿದ ಅವರು "ಈವರೆಗೂ ಎಲ್ಲಾ ಪೀಠಗಳ ಉಸ್ತುವಾರಿಗಳ ಸಮಾಲೋಚನೆಯನ್ನು ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಎಲ್ಲವೂ ಸರಿಯಿದ್ದಾಗಲೂ ಸಹ ಟೀಕೆಗಳು ಬರುವುದನ್ನು ಸ್ವಾಗತಿಸಬೇಕು ಏಕೆಂದರೆ ಟೀಕೆಗಳು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಒರೆಗೆ ಹಚ್ಚಿ ನೋಡಲು ಸಹಾಯಕವಾಗುತ್ತವೆ." ಎಂದು ಹೇಳಿದರು.
ತಮ್ಮ ಪೋಪಾಧಿಕಾರದ ವೇಳೆ ತಾವು ಎದುರಿಸಿದ ದೊಡ್ಡ ಸಮಸ್ಯೆಗಳು ಯಾವುದು ಎಂದು ಕೇಳಿದಾಗ "ನಿಸ್ಸಂಶಯವಾಗಿಯೂ ಕೊರೋನಾ ಸಾಂಕ್ರಮಿಕ ಹಾಗೂ ಪ್ರಸ್ತುತ ಯುದ್ಧ ಸನ್ನಿವೇಷಗಳು, ವಿಶೇಷವಾಗಿ ಮ್ಯಾನ್ಮಾರ್, ಉಕ್ರೇನ್ ಮತ್ತು ಮಧ್ಯಪ್ರಾಚ್ಯ" ಎಂದು ಹೇಳಿದರು.