ಸಂಕಷ್ಟಗಳ ನಡುವೆಯೂ ಕ್ರೈಸ್ತರು ಶುಭ ಸಂದೇಶದ ಶಾಂತಿಯನ್ನು ಸಾರಬೇಕು: ಪೋಪ್ ಫ್ರಾನ್ಸಿಸ್
ಇಟಲಿಯ ರಿಮಿನಿ ನಗರದಲ್ಲಿ ನಾಗರೀಕರು ಪ್ರತಿ ತಿಂಗಳು ನಗರದ ಚೌಕದಲ್ಲಿ ಜಪಸರ ಪ್ರಾರ್ಥನೆಯನ್ನು ಹೇಳುವುದನ್ನು ಮನಗಂಡಿರುವ ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕ್ರೈಸ್ತರಾದ ನಾವು ಎಲ್ಲಾ ಸಂದರ್ಭಗಳಲ್ಲಿಯೂ ಶುಭಸಂದೇಶವನ್ನು ಸಾರಲು ಕರೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಇಟಲಿಯ ರಿಮಿನಿ ನಗರದಲ್ಲಿ ನಾಗರೀಕರು ಪ್ರತಿ ತಿಂಗಳು ನಗರದ ಚೌಕದಲ್ಲಿ ಜಪಸರ ಪ್ರಾರ್ಥನೆಯನ್ನು ಹೇಳುವುದನ್ನು ಮನಗಂಡಿರುವ ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕ್ರೈಸ್ತರಾದ ನಾವು ಎಲ್ಲಾ ಸಂದರ್ಭಗಳಲ್ಲಿಯೂ ಶುಭಸಂದೇಶವನ್ನು ಸಾರಲು ಕರೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಕಥೋಲಿಕರು ಪ್ರತಿ ತಿಂಗಳ ಇಪ್ಪತ್ತನೇ ತಾರೀಖಿನಂದು ರಿಮಿನಿ ನಗರದ ಚೌಕದಲ್ಲಿ ಒಂದಾಗಿ ಸೇರಿ ಜಪಸರ ಪ್ರಾರ್ಥನೆಯನ್ನು ಮಾಡುತ್ತಾರೆ.
ಈ ಕುರಿತು ಅವರ ಹತ್ತನೇ ವರ್ಷಾಚರಣೆಯ ವೇಳೆ ಅವರಿಗಾಗಿ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ಕಳುಹಿಸಿದ್ದು, ಅವರಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೆ, ಕ್ರೈಸ್ತರಾದ ಎಲ್ಲರೂ ಎಂತದ್ದೇ ಸಂಕಷ್ಟಗಳ ನಡುವೆಯೂ ಪ್ರಭು ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರಲು ಕರೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.
16 August 2024, 18:24