ಪೋಪ್ ಫ್ರಾನ್ಸಿಸ್: ಲೆಬಾನನ್ ಶಾಂತಿಯ ದೇಶವಾಗಿ ಉಳಿಯಬೇಕು

ಪೋಪ್ ಫ್ರಾನ್ಸಿಸ್ ಅವರು ಸೋಮವಾರ ವ್ಯಾಟಿಕನ್ ನಗರದ ಕನ್ಸಿಸ್ಟರಿ ಸಭಾಂಗಣದಲ್ಲಿ 2020 ರಲ್ಲಿ ಇಲ್ಲಿನ ಬೀರುತ್ ನಗರದ ಬಂದರಿನಲ್ಲಿ ನಡೆದ ದೊಡ್ಡ ಸ್ಫೋಟದಲ್ಲಿ ಮೃತರಾದವರ ಕುಟುಂಬಗಳೊಂದಿಗೆ ಮಾತುಕತೆಯನ್ನು ನಡೆಸುತ್ತಾ ಅವರಿಗೆ ತಮ್ಮ ಐಕ್ಯತೆ ಹಾಗೂ ಪ್ರಾರ್ಥನೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನ್ಯಾಯ ಹಾಗೂ ಸತ್ಯದ ಅನ್ವೇಷಣೆಯಲ್ಲಿ ತಾವು ಅವರ ಜೊತೆಗೆ ಇರುತ್ತೇನೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮತ್ತೆ ಮಧ್ಯ ಪ್ರಾಚ್ಯದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲು ಬೀರುತ್ ನಗರದ ಸ್ಪೋಟದಲ್ಲಿ ಮೃತಹೊಂದಿದವರ ಕುಟುಂಬಗಳ ಪೈಕಿ ಮೂವತ್ತು-ಜನರ ಗುಂಪು ವ್ಯಾಟಿಕನ್ ನಗರಕ್ಕೆ ಬಂದಿತ್ತು. ಇವರೆಲ್ಲರೂ ಪೋಪ್ ಫ್ರಾನ್ಸಿಸ್ ಅವರ ಮಾತುಗಳಿಗಾಗಿ ಕಾತರದಿಂದ ಕಾಯುತ್ತಿದ್ದರು.

ಸತ್ಯ ಮತ್ತು ನ್ಯಾಯ

ನಾಲ್ಕು ವರ್ಷಗಳ ಹಿಂದೆ ಲೆಬಾನನ್ನಿನ ಬೀರುತ್ ನಗರದ ಬಂದರಿನಲ್ಲಿ ದೊಡ್ಡ ಮಟ್ಟದ ಸ್ಪೋಟಕಗಳನ್ನು ಸರಿಯಾದ ನಿಟ್ಟಿನಲ್ಲಿ ಸಂಗ್ರಹಿಸಿಡದ ಕಾರಣ ಸ್ಪೋಟ ಸಂಭವಿಸಿ ಸುಮಾರು ಇನ್ನೂರು ಜನರು ಮೃತಹೊಂದಿ, ಸಾವಿರಾರು ಜನರಿಗೆ ಗಾಯಗಳಾಗಿತ್ತು. ಇದು ಅಲ್ಲಿ ನೆಲೆಯೂರಿದ್ದ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯವನ್ನು ಸೂಚಿಸಿತ್ತು.

ಮೃತ ಹೊಂದಿದವರ ಕುಟುಂಬಸ್ಥರು ಇದಕ್ಕೆ ಕಾರಣರಾದ ಎಲ್ಲರನ್ನೂ ಬಂಧಿಸಿ ಅವರಿಗೆ ಶಿಕ್ಷೆಯನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಈ ಸ್ಪೋಟ ಅಫಘಾತವಲ್ಲ ಬದಲಿಗೆ ಸರ್ಕಾರದ ನಿರ್ಲಕ್ಷ್ಯದಿಂದ ನಡೆದಿರುವ ಕೃತ್ಯ ಎಂದು ಅವರು ಹೇಳಿದರು.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇವರನ್ನು ಭೇಟಿ ಮಾಡಿ, ಅವರಿಗೆ ಸಾಂತ್ವನವನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.

26 August 2024, 15:13