ಹುಡುಕಿ

++ Il Papa, attacchi e uccisioni mirate non sono soluzione ++

ಹೇಗೆ ಸಾಹಿತ್ಯದ ಓದು ಹೃದಯ ಮತ್ತು ಮನಸ್ಸಿಗೆ ಅರಿವು ನೀಡುತ್ತದೆ ಎಂಬ ಕುರಿತು ಪತ್ರ ಬರೆದ ವಿಶ್ವಗುರು ಫ್ರಾನ್ಸಿಸ್

ಗುರು ಅಭ್ಯರ್ಥಿಗಳಿಗೆ, ಪಾಲನಾ ಸೇವಕರಿಗೆ ಹಾಗೂ ಜಗತ್ತಿನಾದ್ಯಂತ ಇರುವ ಕ್ರೈಸ್ತರಿಗೆ ಕಾದಂಬರಿ, ಕಾವ್ಯ ಹಾಗೂ ಕಥೆಗಳನ್ನು ಓದುವ ಕುರಿತು ಹಾಗೂ ಅವುಗಳ ಮೌಲ್ಯದ ಕುರಿತು ತಿಳಿಸಲು ಪತ್ರವನ್ನು ಬರೆದಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಪುಸ್ತಕಗಳನ್ನು ಓದುವುದು ಮನುಷ್ಯರ ವೈಯಕ್ತಿಕ ಉನ್ನತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಪುಸ್ತಕಗಳು ನಮ್ಮ ಅಂತರ್ಯವನ್ನು ತೆರೆಯಲು ಹಾಗೂ ಬದುಕಿನ ಸವಾಲುಗಳನ್ನು ಮೆಟ್ಟಿ ನಿಲ್ಲಲು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವರದಿ: ತಿಜಿಯಾನ ಕಂಪಿಸಿ, ಅಜಯ್ ಕುಮಾರ್

ವಿಶೇಷವಾಗಿ ಗುರು ಅಭ್ಯರ್ಥಿಗಳಿಗೆ ಈ ಪತ್ರವನ್ನು ಬರೆದಿರುವ ಅವರು ಸಾಹಿತ್ಯವನ್ನು ಓದುವುದು ಹೇಗೆ ಕೇವಲ ಮನರಂಜನೆ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಲ್ಲಿ ಓದುವ ಸದ್ಗುಣಗಳನ್ನು, ಸಮಾಜವನ್ನು ವಿವಿಧ ದೃಷ್ಟಿಕೋನಗಳಲ್ಲಿ ನೋಡುವ ಬಗೆಯನ್ನು ಕಲಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಕಾದಂಬರಿ ಕಥೆ ಕವಿತೆಗಳನ್ನು ಓದುವುದನ್ನು ಬದುಕಿನಲ್ಲಿ ರೂಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಮಾತ್ರ ಸಮಾಜದ ವಿವಿಧ ಅಭಿಪ್ರಾಯಗಳನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ನಾವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಲವು ಪುಸ್ತಕಗಳನ್ನು ಓದಿದ್ದರೆ, ನಾವು ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ನಮಗೆ ಹಲವಾರು ಆಯ್ಕೆಗಳು ಇರುತ್ತವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಗುರು ಅಭ್ಯರ್ಥಿಗಳು, ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಸೇರಿದಂತೆ ಎಲ್ಲಾ ಕ್ರೈಸ್ತರು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಅಭಿಪ್ರಾಯ ಪಟ್ಟಿದ್ದಾರೆ.

04 August 2024, 18:30