ಉದ್ವಿಗ್ನವಾಗುತ್ತಿರುವ ಮಧ್ಯಪ್ರಾಚ್ಯದ ವಿಷಮ ಪರಿಸ್ಥಿತಿಯಲ್ಲಿಯೂ ಸಹ ನಾವು ಭರವಸೆಯನ್ನು ಜೀವಂತವಾಗಿರಿಸಬೇಕು: ಧರ್ಮಾಧ್ಯಕ್ಷರಿಗೆ ಪೋಪ್ ಕಿವಿಮಾತು

ಅರೇಬಿಯನ್ ಪ್ರಾಂತ್ಯದ ಲ್ಯಾಟಿನ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಉದ್ವಿಗ್ನವಾಗುತ್ತಿರುವ ಮಧ್ಯಪ್ರಾಚ್ಯದ ವಿಷಮ ಪರಿಸ್ಥಿತಿಯಲ್ಲಿಯೂ ಸಹ ನಾವು ಭರವಸೆಯನ್ನು ಜೀವಂತವಾಗಿರಿಸಬೇಕು ಎಂದು ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ಶಾಂತಿ ಹಾಗೂ ಸಂಧಾನದ ಸೇವಾಕಾರ್ಯವನ್ನು ಮುಂದುವರೆಸಬೇಕು ಎಂದು ಅವರು ಧರ್ಮಾಧ್ಯಕ್ಷರಿಗೆ ಹುರಿದುಂಬಿಸಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಬುಧವಾರ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಮಾತನಾಡಿದ್ದಾರೆ.

ಅರೇಬಿಯನ್ ಪ್ರಾಂತ್ಯದ ಲ್ಯಾಟಿನ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಉದ್ವಿಗ್ನವಾಗುತ್ತಿರುವ ಮಧ್ಯಪ್ರಾಚ್ಯದ ವಿಷಮ ಪರಿಸ್ಥಿತಿಯಲ್ಲಿಯೂ ಸಹ ನಾವು ಭರವಸೆಯನ್ನು ಜೀವಂತವಾಗಿರಿಸಬೇಕು ಎಂದು ಅವರಿಗೆ ಕಿವಿಮಾತನ್ನು ಹೇಳಿದ್ದಾರೆ. ಶಾಂತಿ ಹಾಗೂ ಸಂಧಾನದ ಸೇವಾಕಾರ್ಯವನ್ನು ಮುಂದುವರೆಸಬೇಕು ಎಂದು ಅವರು ಧರ್ಮಾಧ್ಯಕ್ಷರಿಗೆ ಹುರಿದುಂಬಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು "ಪವಿತ್ರ ನಾಡಿನಲ್ಲಿ ಪರಿಸ್ಥಿತಿ ಶಾಂತಿಯುತವಾಗುವುದರ ಬದಲಿಗೆ ದಿನೇ ದಿನೇ ಹೆಚ್ಚು ಉದ್ರಿಕ್ತವಾಗುತ್ತಿದೆ" ಎಂದು ಹೇಳುವ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ಯಾವುದೇ ಸಂಧರ್ಭದಲ್ಲೂ ಶಾಂತಿ ಹಾಗೂ ಸಂಧಾನವನ್ನು ಉತ್ತೇಜಿಸುವುದನ್ನು ಮರೆಯಬೇಡಿ. ಏಕೆಂದರೆ, ಇಂದು ಶಾಂತಿಯ ಅಗತ್ಯತೆ ಹೆಚ್ಚಿದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

"ಭರವಸೆಯನ್ನು ಜೀವಂತವಾಗಿಡಿ. ಎಲ್ಲರಿಗೂ ಭರವಸೆಯ ಸಂಕೇತವಾಗಿರಿ" ಎಂದು ಅರೇಬಿಯನ್ ಪ್ರಾಂತ್ಯದ ಲ್ಯಾಟಿನ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಮಾತನಾಡಿದ್ದಾರೆ.

28 August 2024, 15:07