ಹುಡುಕಿ

ಪೋಪ್ ಫ್ರಾನ್ಸಿಸ್: ಸಮುದ್ರ ಮತ್ತು ಮರುಭೂಮಿಯಲ್ಲಿ ಅಸುನೀಗುತ್ತಿರುವ ವಲಸಿಗರ ಕರುಣಾಜನಕ ಕಥೆಯನ್ನು ಜಗತ್ತು ಆಲಿಸಬೇಕು

ಪೋಪ್ ಫ್ರಾನ್ಸಿಸ್ ಅವರು ಬುಧವಾರ ತಮ್ಮ ವಾರದ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ವಲಸಿಗರ ಕುರಿತು ಮಾತನಾಡಿರುವ ಅವರು ಸಮುದ್ರ ಮತ್ತು ಮರುಭೂಮಿಯಲ್ಲಿ ಅಸುನೀಗುತ್ತಿರುವ ವಲಸಿಗರ ಕರುಣಾಜನಕ ಕಥೆಯನ್ನು ಜಗತ್ತು ಆಲಿಸಬೇಕು ಎಂದು ಹೇಳಿದ್ದಾರೆ ಮಾತ್ರವಲ್ಲದೆ, ಅವರ ಸಂಕಷ್ಟಗಳಿಗಾಗಿ ಮರುಗುವ ವ್ಯವಧಾನವನ್ನು ಎಲ್ಲಾ ದೇಶಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಬುಧವಾರ ತಮ್ಮ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಪವಿತ್ರಾತ್ಮರ ಕುರಿತು ಧರ್ಮೋಪದೇಶ ಸರಣಿಯನ್ನು ಮುಂದುವರೆಸುವ ಬದಲಿಗೆ ವಲಸಿಗರ ಸಂಕಷ್ಟಗಳ ಕುರಿತು ಮಾತನಾಡಿದ್ದಾರೆ.

ಇಲ್ಲಿ ವಲಸಿಗರ ಕುರಿತು ಮಾತನಾಡಿರುವ ಅವರು ಸಮುದ್ರ ಮತ್ತು ಮರುಭೂಮಿಯಲ್ಲಿ ಅಸುನೀಗುತ್ತಿರುವ ವಲಸಿಗರ ಕರುಣಾಜನಕ ಕಥೆಯನ್ನು ಜಗತ್ತು ಆಲಿಸಬೇಕು ಎಂದು ಹೇಳಿದ್ದಾರೆ ಮಾತ್ರವಲ್ಲದೆ, ಅವರ ಸಂಕಷ್ಟಗಳಿಗಾಗಿ ಮರುಗುವ ವ್ಯವಧಾನವನ್ನು ಎಲ್ಲಾ ದೇಶಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

"ಉತ್ತಮ ಜೀವನವನ್ನು ಅರಸಿ, ತಮ್ಮ ತಾಯ್ನಾಡು ಹಾಗೂ ಎಲ್ಲವನ್ನೂ ತೊರೆದು ಹೋಗುವ ವಲಸಿಗರ ಬದುಕಿನಲ್ಲಿ ಪದೇ ಪದೇ ಕೇಳಿಬರುವ ಎರಡು ಪದಗಳೆಂದರೆ ಅದು ಸಮುದ್ರ ಹಾಗೂ ಮರುಭೂಮಿ" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಯಾವ ಅಪಾಯವನ್ನೂ ಲೆಕ್ಕಿಸದೆ ಹೊರಡುವ ಅವರು ಸಮುದ್ರವನ್ನು ದಾಟುವಾಗ ಹಾಗೂ ಮರುಭೂಮಿಯನ್ನು ದಾಟುವಾಗ ಅಸುನೀಗುತ್ತಾರೆ" ಎಂದು ಹೇಳಿದ್ದಾರೆ.

"ಈ ಸಾವುಗಳನ್ನು ತಡೆಯಬಹುದಾಗಿದೆ. ಆದರೆ, ವ್ಯವಸ್ಥೆ ಎಂಬುದು ವಲಸಿಗರನ್ನು ಹಿಂದೆ ತಳ್ಳಲು ಪ್ರಯತ್ನಿಸುತ್ತದೆ" ಎಂದು ಹೇಳಿದ್ದಾರೆ. ಈ ಜಗತ್ತು ಸಮುದ್ರಗಳು ಹಾಗೂ ಮರುಭೂಮಿಗಳಲ್ಲಿ ಅಸುನೀಗುತ್ತಿರುವ ವಲಸಿಗರ ಕರುಣಾಜನಕ ಕಥೆಗಳನ್ನು ಆಲಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

28 August 2024, 15:10