ಎಂಪಾಕ್ಸ್ ಖಾಯಿಲೆಯಿಂದ ಬಳಲುತ್ತಿರುವವರಿಗೆ ಐಕ್ಯತೆ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ನಗರದಲ್ಲಿ ತಮ್ಮ ಭಾನುವಾರದ ದೇವದೂತನ ಸಂದೇಶ ಪ್ರಾರ್ಥನೆಯ ನಂತರ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ವಿಶ್ವದಾದ್ಯಂತ ಮಂಕಿ ಪಾಕ್ಸ್ ಖಾಯಿಲೆಗೆ ತುತ್ತಾಗಿ ನರಳುತ್ತಿರುವವರೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್'ಸಿ) ದೇಶದಲ್ಲಿ ಈ ಖಾಯಿಲೆಯೂ ತೀವ್ರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಐಕ್ಯತೆ ಹಾಗೂ ಪ್ರಾರ್ಥನೆಯನ್ನು ವ್ಯಕ್ತಪಡಿಸಿದ್ದಾರೆ.
ನಿಕರಾಗುವ ಜನತೆಗಾಗಿ ಪ್ರಾರ್ಥನೆ
ಇತ್ತೀಚೆಗಷ್ಟೇ ನಿಕರಾಗುವ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಅಲ್ಲಿನ ಸರ್ಕಾರ ಹತ್ತಿಕ್ಕುತ್ತಿದ್ದು, ಅದರ ಬೆನ್ನಲ್ಲೇ ಹಲವಾರು ಗುರುಗಳ ಬಂಧನ ಗಡೀಪಾರು ಸೇರಿದಂತೆ ಹಲವು ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆದಿವೆ. ಇತ್ತೀಚೆಗೆ ಅಲ್ಲಿನ ಸರ್ಕಾರವು ಚರ್ಚುಗಳಲ್ಲಿ ಸಂಗ್ರಹವಾಗುವ ಕಾಣಿಕೆಯ ಮೇಲೆ ತೆರಿಗೆಯನ್ನು ವಿಧಿಸುವ ನಿಟ್ಟಿನಲ್ಲಿ ಕಾನೂನನ್ನು ಪರಿಚಯಿಸಿದೆ.
ಈ ಹಿನ್ನೆಲೆಯಲ್ಲಿ ನಿಕರಾಗುವ ದೇಶಕ್ಕಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್ ಅವರು ಅಲ್ಲಿನ ಜನತೆಗೆ ಯೇಸುವಿನಲ್ಲಿ ಸದಾ ವಿಶ್ವಾಸ ಹಾಗೂ ಭರವಸೆಯನ್ನು ಹೊಂದುವಂತೆ ಕರೆ ನೀಡಿದ್ದಾರೆ.