ಹುಡುಕಿ

ಕಪುಚಿನ್ ಸಭೆಯವರಿಗೆ ಪೋಪ್: ಅಸಿಸ್ಸಿಯ ಸಂತ ಫ್ರಾನ್ಸಿಸ್ ಅವರ ಹೆಜ್ಜೆಗಳಲ್ಲಿ ನಡೆದು ಶಾಂತಿ ಮೂಡಿಸುವವರಾಗಿರಿ

ಆರ್ಡರ್ ಆಫ್ ಫ್ರಯರ್ಸ್ ಮೈನರ್ ಕಪುಚಿನ್ (ಓ.ಎಫ್.ಎಂ. ಕಪುಚಿನ್) ಧಾರ್ಮಿಕ ಸಭೆಯ ಗುರುಗಳು ರೋಮ್ ನಗರದಲ್ಲಿ ತಮ್ಮ ಸಭೆಯ 86ನೇ ಸರ್ವಸದಸ್ಯರ ಸಭೆಯಲ್ಲಿ (ಜನರಲ್ ಚಾಪ್ಟರ್) ಭಾಗವಹಿಸಲು ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರುನ್ನು ಭೇಟಿ ಮಾಡಿ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಅಸಿಸ್ಸಿಯ ಸಂತ ಫ್ರಾನ್ಸಿಸರಂತೆ ಈ ಜಗತ್ತಿನಲ್ಲಿ ಶಾಂತಿಯನ್ನು ಮೂಡಿಸುವ ಶಾಂತಿಧಾತರಾಗಿರಿ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

"ನಾನು ಈ ಜಗತ್ತಿಗೆ ಹೋಗಲು ಪ್ರಭು ನನಗೆ ಸಹೋದರರನ್ನು ನೀಡಿದ್ದಾರೆ" ಎಂಬ ಶಿರ್ಷಿಕೆಯಡಿಯಲ್ಲಿ ಕಪುಚಿನ ಸಭೆಯ ಗುರುಗಳು ರೋಮ್ ನಗರಲದಲ್ಲಿ ತಮ್ಮ ಜನರಲ್ ಚಾಪ್ಟರ್ ಸಭೆಗೆ ಆಗಮಿಸಿದ್ದಾರೆ.

ಆರ್ಡರ್ ಆಫ್ ಫ್ರಯರ್ಸ್ ಮೈನರ್ ಕಪುಚಿನ್ (ಓ.ಎಫ್.ಎಂ. ಕಪುಚಿನ್) ಧಾರ್ಮಿಕ ಸಭೆಯ ಗುರುಗಳು ರೋಮ್ ನಗರದಲ್ಲಿ ತಮ್ಮ ಸಭೆಯ 86ನೇ ಸರ್ವಸದಸ್ಯರ ಸಭೆಯಲ್ಲಿ (ಜನರಲ್ ಚಾಪ್ಟರ್) ಭಾಗವಹಿಸಲು ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರುನ್ನು ಭೇಟಿ ಮಾಡಿ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಅಸಿಸ್ಸಿಯ ಸಂತ ಫ್ರಾನ್ಸಿಸರಂತೆ ಈ ಜಗತ್ತಿನಲ್ಲಿ ಶಾಂತಿಯನ್ನು ಮೂಡಿಸುವ ಶಾಂತಿಧಾತರಾಗಿರಿ ಎಂದು ಹೇಳಿದ್ದಾರೆ.

ಸುಮಾರು ನೂರು ದೇಶಗಳಿಂದ ಬಂದಿರುವ ವಿವಿಧ ಕಪುಚಿನ್ ಗುರುಗಳು ತಮ್ಮ ಧಾರ್ಮಿಕ ಸಭೆಯು ಕಳೆದ ಆರು ವರ್ಷಗಳಲ್ಲಿ ಏನನ್ನು ಸಾಧಿಸಿದೆ ಹಾಗೂ ಮುಂದಿನ ಆರು ವರ್ಷಗಳಲ್ಲಿ ಏನನ್ನು ಸಾಧಿಸಬಹುದು ಎಂಬ ಕುರಿತು ಮೌಲ್ಯಮಾಪನ ಮತ್ತು ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳಲು ರೋಮ್ ನಗರಕ್ಕೆ ಬಂದಿದ್ದಾರೆ.

ಇವರನ್ನು ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಅಸಿಸ್ಸಿಯ ಸಂತ ಫ್ರಾನ್ಸಿಸರ ತತ್ವಗಳಂತೆ ನೀವು ಸಮಾಜದಲ್ಲಿ ಸೋದರತ್ವವನ್ನು ಮೂಡಿಸಲು ಕಾರ್ಯನಿರ್ವಹಿಸಬೇಕಿದೆ" ಎಂದು ಹೇಳಿದರು. ಎಲ್ಲರಿಗೂ ಸೇವೆಯನ್ನು ನೀಡುವ ಸಿದ್ಧತಾ ಮನೋಭಾವ ಎಂದಿಗೂ ನಿಮ್ಮಲ್ಲಿರಬೇಕು, ವಿಶೇಷವಾಗಿ ಈ ಜಗತ್ತಿನಲ್ಲಿ ಶಾಂತಿಯನ್ನು ಮೂಡಿಸಲು ನೀವು ಸದಾ ಪ್ರಯತ್ನಿಸಬೇಕು ಎಂದು ಅವರು ಕಪುಚಿನ್ ಸಭೆಗ ಗುರುಗಳಿಗೆ ಹೇಳಿದರು.

31 August 2024, 16:40