ಸಂಘರ್ಷಗಳಿಂದ ಬಾಧಿತರಾಗಿರುವ ದೇಶಗಳಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಬುಧವಾರ ತಮ್ಮ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಪ್ ಫ್ರಾನ್ಸಿಸ್ ಅವರು ವಿವಿಧ ಜನರನ್ನು ಹಾಗೂ ಆಯೋಗಗಳನ್ನು ಭೇಟಿ ಮಾಡಿದರು. ಆರಂಭ ಪ್ರಾರ್ಥನೆಯನ್ನು ಮುಗಿಸಿ ಮಾತನಾಡಿದ ಅವರು ವಿಶೇಷವಾಗಿ ಪ್ರಪಂಚದಾದ್ಯಂತ ಯುದ್ಧ ಸೇರಿದಂತೆ ಹಲವು ಸಂಘರ್ಷಗಳನ್ನು ಎದುರಿಸುತ್ತಿರುವ ದೇಶಗಳಿಗಾಗಿ ಪ್ರಾರ್ಥಿಸಿ, ಎಲ್ಲಾ ಕ್ರೈಸ್ತರೂ ಪ್ರಾರ್ಥಿಸುವಂತೆ ಕರೆ ನೀಡಿದರು.
ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಯುದ್ಧಗ್ರಸ್ಥ ದೇಶಗಳಾದ ಉಕ್ರೇನ್, ಪ್ಯಾಲೆಸ್ತೇನ್ ಕುರಿತಂತೆ ಮಾತನಾಡಿ, ಅಲ್ಲಿ ಹಿಂಸೆಯನ್ನು ಅನುಭವಿಸುತ್ತಿರುವವರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.
ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರನ್ನು ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ತಮ್ಮದಲ್ಲದ ತಪ್ಪಿಗೆ ಮುಗ್ಧ ಜೀವಗಳು ಬಲಿಯಾಗುತ್ತಿವೆ ಮಾತ್ರವಲ್ಲದೆ ಪ್ರತಿದಿನ ಹಿಂಸೆಯನ್ನು ಅನುಭವಿಸುತ್ತಿವೆ. ಇದಕ್ಕಾಗಿಯಾದರೂ ಯುದ್ಧವನ್ನು ನಿಲ್ಲಿಸಬೇಕು. ಯುದ್ಧ ಎಂದಿಗೂ ಸೋಲಾಗಿದೆ ಎಂದು ತಮ್ಮ ಮಾತುಗಳನ್ನು ಪುನರುಚ್ಛರಿಸಿದರು.