ಧಾರ್ಮಿಕ ಸಹೋದರ ಸಹೋದರಿಯರಿಗೆ ತಮ್ಮ ದೈವಕರೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್
ರೋಮ್ ನಗರದಲ್ಲಿ ತಮ್ಮ ಧಾರ್ಮಿಕ ಸಭೆಯಗಳ ಸಮಾವೇಷಗಳನ್ನು ಹಮ್ಮಿಕೊಂಡಿರುವ ನಾಲ್ಕು ಧಾರ್ಮಿಕ ಸಭೆಗಳ ಸದಸ್ಯರನ್ನು ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ದೈವಕರೆಯನ್ನು ಗಂಭೀರವಾಗಿ ಪರಿಗಣಿಸಿ, ಸೇವಾ ಮನೋಭಾವವನ್ನು ಬದುಕಿನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಡೊಮಿನಿಕನ್ ಮಿಷನರಿ ಸಿಸ್ಟರ್ಸ್ ಆಫ್ ಸೇಂಟ್ ಸಿಕ್ಸ್'ಟಸ್, ಸಿಸ್ಟರ್ಸ್ ಆಫ್ ದಿ ಸೊಸೈಟಿ ಆಫ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಸಿಸ್ಟರ್ಸ್ ಆಫ್ ದಿ ಪ್ರೆಸೆಂಟೇಷನ್ ಆಫ್ ದಿ ಮೋಸ್ಟ್ ಹೋಲಿ ಇನ್ ಟೆಂಪಲ್, ಹಾಗೂ ಸೊಸೈಟಿ ಆಫ್ ದಿ ಡಿವೈನ್ ವೊಕೇಶನ್ಸ್ (ವೊಕೇಶನಿಸ್ಟ್ ಫಾದರ್ಸ್) ಧಾರ್ಮಿಕ ಸಭೆಗಳು ರೋಮ್ ನಗರದಲ್ಲಿ ಸಮಾವೇಷಗಳನ್ನು ಹಮ್ಮಿಕೊಂಡಿವೆ.
ಪೋಪ್ ಫ್ರಾನ್ಸಿಸ್ ಅವರು ಈ ಧಾರ್ಮಿಕ ಸಭೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
"ನಿಮ್ಮ ಧಾರ್ಮಿಕ ಬದುಕಿನಲ್ಲಿ ದೈವಕರೆಯ ಕುರಿತು ಪದೇ ಪದೇ ಚಿಂತನೆಯನ್ನು ನಡೆಸಬೇಕು ಮಾತ್ರವಲ್ಲದೆ, ದೀಕ್ಷೆ ಪಡೆದ ನಂತರವೂ ಸಹ ಮುಂದುವರೆದ ತರಭೇತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸೇವಾ ಮನೋಭಾವವನ್ನು ರೂಪಿಸಿಕೊಳ್ಳಬೇಕು. ಉದಾರತೆಯಿಂದ ನಡೆದುಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದರು.